Showing posts with label ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ gurujagannatha vittala. Show all posts
Showing posts with label ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ gurujagannatha vittala. Show all posts

Wednesday 1 September 2021

ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ ankita gurujagannatha vittala

 ..

ಬಂದ ಶಿರಿ ರಾಘವೇಂದ್ರಮೂರುತಿ ಮನ

ಮಂದಿರದೊಳಗೆ ಸರಸದಿ ಪ


ಬಂದನು ಭಕುತನ ಬಂಧನ ಬಿಡಿಸ್ಯಾ -

ನಂದನೀಡುತ ಮುದದಿಂದಲಿ ಭರದಿಂದಅ.ಪ

ಮುದದಲಿ ಶೋಭಿಪ ವದÀನದೊಳೊಪ್ಪುವ

ರದನದಿ ಶೋಭಿತನು

ಉದಿಸಿದ ಎನ್ನಯ ಹೃದಯಾಂಬರದೊಳು

ಸದಯ ಮೂರುತಿ ಧರನು

ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ

ತೋರುತಾ - ಬೀರುತಾ -

ಪದಸಕಿತ - ಸುಖನೀಡುತ

ಇದು ಮೊದಲಾ ಗಿಹ - ಅದ್ಭುತ ಮಹಿಮೆಯ

ಪದÀದಲಿ ತೋರುತ ಸದಮಲ ಮನದೊಳು 1


ಕುಣಿದಾಡುತ ಗುಣಗಳ ಗಣಿಸುವ ಭಕ್ತರ

ದಣಿಸೆನೊ ಭವದೊಳಗೆ

ಗಣಿಸುವೆ ದಾಸರ ಗಣದೊಳಗವನಿಗೆ

ಉಣಿಸುವೆ ಪರಸುಖ ಕೊನಿಗೆ

ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ

ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ

ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ

ತೃಣ ಸಮವೋ ಧಣಿ ನಾ ನಿನಗೆಂದು 2


ಧಿಟಜ್ಞಾನ - ಭಕುತಿಯ ಥಟನೆ ಕೊಡುವೊ

ಉತ್ಕಟ ಮಹಿಮನೋ ನಾನು

ಪಟುತರ ಎನಪದ ಚಟುಲ ನಳಿನಯುಗ

ಷಟ್ಪದ ಸಮ ನೀನೋ

ನಾನಾಡಿದ ನುಡಿ ಖರೆಯಾ - ಮರೆಯಾ

ಬೇಡೆಲೋ - ನೋಡೆಲೋ -

ಕೊಂಡಾಡೆಲೋ ನೀಡೆಲೋ

ಘಟಿಸುವೆ ಸಮಯಕೆ - ಧಿಟ ಗುರುಜಗನ್ನಾಥ

ವಿಠಲನ ಹೃತ್ಯಂ - ಪುಟದಿ ತೋರುವೆನೆಂದು 3

***