Wednesday 1 September 2021

ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ ankita gurujagannatha vittala

 ..

ಬಂದ ಶಿರಿ ರಾಘವೇಂದ್ರಮೂರುತಿ ಮನ

ಮಂದಿರದೊಳಗೆ ಸರಸದಿ ಪ


ಬಂದನು ಭಕುತನ ಬಂಧನ ಬಿಡಿಸ್ಯಾ -

ನಂದನೀಡುತ ಮುದದಿಂದಲಿ ಭರದಿಂದಅ.ಪ

ಮುದದಲಿ ಶೋಭಿಪ ವದÀನದೊಳೊಪ್ಪುವ

ರದನದಿ ಶೋಭಿತನು

ಉದಿಸಿದ ಎನ್ನಯ ಹೃದಯಾಂಬರದೊಳು

ಸದಯ ಮೂರುತಿ ಧರನು

ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ

ತೋರುತಾ - ಬೀರುತಾ -

ಪದಸಕಿತ - ಸುಖನೀಡುತ

ಇದು ಮೊದಲಾ ಗಿಹ - ಅದ್ಭುತ ಮಹಿಮೆಯ

ಪದÀದಲಿ ತೋರುತ ಸದಮಲ ಮನದೊಳು 1


ಕುಣಿದಾಡುತ ಗುಣಗಳ ಗಣಿಸುವ ಭಕ್ತರ

ದಣಿಸೆನೊ ಭವದೊಳಗೆ

ಗಣಿಸುವೆ ದಾಸರ ಗಣದೊಳಗವನಿಗೆ

ಉಣಿಸುವೆ ಪರಸುಖ ಕೊನಿಗೆ

ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ

ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ

ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ

ತೃಣ ಸಮವೋ ಧಣಿ ನಾ ನಿನಗೆಂದು 2


ಧಿಟಜ್ಞಾನ - ಭಕುತಿಯ ಥಟನೆ ಕೊಡುವೊ

ಉತ್ಕಟ ಮಹಿಮನೋ ನಾನು

ಪಟುತರ ಎನಪದ ಚಟುಲ ನಳಿನಯುಗ

ಷಟ್ಪದ ಸಮ ನೀನೋ

ನಾನಾಡಿದ ನುಡಿ ಖರೆಯಾ - ಮರೆಯಾ

ಬೇಡೆಲೋ - ನೋಡೆಲೋ -

ಕೊಂಡಾಡೆಲೋ ನೀಡೆಲೋ

ಘಟಿಸುವೆ ಸಮಯಕೆ - ಧಿಟ ಗುರುಜಗನ್ನಾಥ

ವಿಠಲನ ಹೃತ್ಯಂ - ಪುಟದಿ ತೋರುವೆನೆಂದು 3

***


No comments:

Post a Comment