..
ನೋಡಿ ದಣಿಯವೆನ್ನ ಕಂಗಳು ಈ ಸೋದೆಲಿರುವ
ಈಡು ಇಲ್ಲದುತ್ಸವಂಗಳ
ಬೇಡಿದವಗೀ ಧ್ವಜಬುತ್ತಿ (?) ನೀಡಿ ದಯಸೂರ್ಯಾಡುವರ ಪ
ಯತಿಗಳ ಸಮೂಹವೆಷ್ಟು ಮಿತಿಯಿಲ್ಲದ ಬ್ರಾಹ್ಮಣ್ಯವೆಷ್ಟು
ಮತಿಹೀನರಿಗೆ ಗತಿಯ ಕೊಡುವ ಪೃಥಿವಿಗಧಿಕ ಗುರುಗಳನ್ನು 1
ಭೂತನಾಥಗೆರಗಿ ನಿಂತು ವಾತಸುತಗೆ ಕೈಯ ಮುಗಿದು
ಆತ ನಾರಾಯಣಭೂತನೆಂಬೋ ನೀತವಾದ ದೂತನಂತೆ2
ಕೊಳಲ ಕೃಷ್ಣ ಧವಳಗಂಗಾ ಹೊಳೆಯೊ ಮುತ್ತಿನ ಗದ್ದಿಗೆ ಮ್ಯಾಲೆ
ಕಳೆಯು ಸುರಿವೊ ಕಮಲಪಾದ ಇಳೆಯೊಳ್ ಇಲ್ಲೀಳಿಗೆಯ ಪೂಜೆ 3
ಸನಕಾದಿ ಸುರೇಶನೆದುರು ಕಣಕ ಹ್ವಾಲಗ (ಹೋಳಿಗೆ?)ವನ್ನೆ ಮಾಡಿ
ಮನಕೆ ಬಂದ ಮೃಷ್ಟಾನ್ನವನು ಜನಕೆ ತೃಪ್ತಿಬಡಿಸುತಿರಲು 4
ಸುತ್ತ ವೃಂದಾವನದ ಮಧ್ಯೆ ಉತ್ತಮರಾದ ವಾದಿರಾಜರು
ಸತ್ಯವತಿಯ ಸುತರ ಎದುರು ನಿತ್ಯಾನಂದಭರಿತರಾಗಿ 5
ಸೃಷ್ಟಿಗಧಿಕಾನಂತಾಸನವು ಶ್ವೇತದ್ವೀಪ್ವೈಕುಂಠವೆಂಬೊ
ಮುಕ್ತಸ್ಥಳದಲ್ವಾಸವಾದ ಲಕ್ಕುಮಿ ತ್ರಿವಿಕ್ರಮನ 6
ನೇಮನಿಷ್ಠ ಸೇವಕ ಜನಕೆ ಬೇಡಿದ ಇಷ್ಟಾರ್ಥ ಕೊಡುವೊ
ಭೀಮೇಶಕೃಷ್ಣ ದಯದಿ ನೋಡಿದೆ ಹಯವದನನಂಘ್ರಿ 7
***
No comments:
Post a Comment