Showing posts with label ಕೃಷ್ಣ ಮುರಾರಿ ಕೇಶವ ಮುರಾರಿ ಅಚ್ಚುತಾನಂತ hayavadana KRISHNA MURAARI KESHAVA MURAARI ACHYUTAANANTA. Show all posts
Showing posts with label ಕೃಷ್ಣ ಮುರಾರಿ ಕೇಶವ ಮುರಾರಿ ಅಚ್ಚುತಾನಂತ hayavadana KRISHNA MURAARI KESHAVA MURAARI ACHYUTAANANTA. Show all posts

Friday, 3 September 2021

ಕೃಷ್ಣ ಮುರಾರಿ ಕೇಶವ ಮುರಾರಿ ಅಚ್ಚುತಾನಂತ ankita hayavadana KRISHNA MURAARI KESHAVA MURAARI ACHYUTAANANTA



ಕೃಷ್ಣ ಮುರಾರಿ ಕೇಶವ ಮುರಾರಿ
ಅಚ್ಚುತಾನಂತ ಗೋವಿಂದ ಮುರಾರಿ||pa||

ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿ
ಭೂಸುರರಿಗ್ವೊರವನಿತ್ತ್ಯೋ ಕೇಶವ ಮುರಾರಿ ||1||

ನಾ ತಾಳಲಾರೆನೊ ಲೋಕಾಧಿಪತಿಯೆ 
ಕಾಯೊಅನಾಥರಕ್ಷಕ ನಾರಾಯಣನೆ ಮುರಾರಿ ||2||

ಮನಸು ನಿಲ್ಲದು ದೇವ ಮಾರನಟ್ಟುಳಿಗೆನ್ನಮನಕಾಗಿ 
ನೀನೆ ಬಾರೊ ಮಾಧವ ಮುರಾರಿ||3||

ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿ
ಗೋಪಿಯರರಸ ಗೋವಿಂದ ಮುರಾರಿ ||4||

ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ-
ದಿಷ್ಟಾರ್ಥವನೀವ ವಿಷ್ಣು ಮುರಾರಿ ||5||

ಮಧುರವಾಕ್ಯಗಳಿಂದ ಮಂದಿರಕಾಗಿ 
ಬಾರೊಮನಸಿಜನಯ್ಯ ಮಧುಸೂದನ ಮುರಾರಿ ||6||

ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂಧಮುದ್ದು 
ನಸುನಗೆಯ ತ್ರಿವಿಕ್ರಮ ಮುರಾರಿ||7||

ಕಾಮಿನಿ ಅಗಲಿಬಂದು ಸೀಮೆನಾಳುವೆÀನೆಂದು
ನೇಮವಾಕ್ಯದಿ ನಿಂದ ವಾಮನ ಮುರಾರಿ ||8||

ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿ
ಸಿಂಧುಶಯನ ಶ್ರೀಧರನೆ ಮುರಾರಿ ||9||

ಋಷಿಗಳಿಗ್ವರವಿತ್ತು ಬೃಂದಾವನದಲ್ಲಿ ನಿಂದು
ಹರುಷವಾರಿಧಿ ಹೃಷಿಕೇಶ ಮುರಾರಿ ||10||

ಪಾವನ್ನ ಮೂರುತಿ ಪರಮದಯಾಳು ನೀನೆ
ಪಾಲಿಸೊ ಶ್ರೀಪದ್ಮನಾಭ ಮುರಾರಿ||11||

ದಾನವರ ಮರ್ದಿಸಿ ಸುಮನಸರಿಗೊಲಿದ
ದಾನದತ್ತನೆ ದಾಮೋದರನೆ ಮುರಾರಿ ||12||

ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧÀರಿಸಿ 
ಅ-ಲಂಕಾರವಾದ ಸಂಕರ್ಷಣನೆ ಮುರಾರಿ ||13||

ಶೇಷಶಯನ ಸಾಧು ಸಜ್ಜನರ ಪೋಷನೀ 
ಸಲವೊ ವಾಸುದೇವ ಮುರಾರಿ ||14||

ಇದ್ದ ಗೋಪೇರಮನೆಯ ಕದ್ದು ಬೆಣ್ಣೆಯ 
ಮೆದ್ದಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ ||15||

ಅನಿಮಿಷನಾಗಿ ಬಂದು ಯಾದವರನೆಲ್ಲ 
ಗೆಲಿದಆ ಮಹಾಮಹಿಮ ಅನಿರುದ್ಧ ಮುರಾರಿ||16||

ಪುನಗು ಕಸ್ತೂರಿಗಂಧ ಪರಿಮಳಪುಷ್ಪದಿಂದ 
ಪುಣ್ಯಮೂರುತಿ ಪುರುಷೋತ್ತಮನೆ ಮುರಾರಿ ||17||

ರಕ್ಷಿಸೋ ನೀ ಎನ್ನ ಅಕ್ಷಯದಿಂದಲಿರಕ್ಷಿಸೋ 
ಅವನಿ ಅಧೋಕ್ಷಜ ಮುರಾರಿ ||18||

ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿಕ್ರೂರವಾಯಿತು 
ನಾರಸಿಂಹ ಮುರಾರಿ ||19||

ಮೆಚ್ಚಿದೆ ನಾ ನಿನ್ನ ಪಕ್ಷಿವಾಹನ ಸ್ವಾಮಿಮುಚ್ಚು
ಮರೆಗಳ್ಯಾಕೊ ಅಚ್ಚುತ ಮುರಾರಿ ||20||

ಜಾಣತನದಿ ಪೋಗಿ ಜಾರಸ್ತ್ರೀಯರನ್ನುಒಡಗೂಡಿ 
ಆಡಿದ ಜನಾರ್ದನ ಮುರಾರಿ||21||

ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ 
ಧರಿಸಿಉಬ್ಬಲ್ಲಿ ಮೆರೆದ ಉಪೇಂದ್ರ ಮುರಾರಿ ||22||

ಹಿರಣ್ಯಾಕ್ಷತನಯನಂದು ಕರೆಯೆ ಕಂಬದಿ 
ಬಂದಗರುವದಿಂದಲೆ ನರಹರಿಯೆ ಮುರಾರಿ ||23||

ಅಟ್ಟಡವಿಯ ತಪಸು ಎಷ್ಟುದಿನವೊ ಸ್ವಾಮಿ
ಪಟ್ಟಣಕಾಗಿ ಬಾರೊ ಕೃಷ್ಣಮುರಾರಿ ||24||

ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿಪಾಲಿಸೊ 
ಶ್ರೀಹಯವದನ ಮುರಾರಿ ||25||
***

Krushna murari kesava murari^^accutananta govinda murari||pa||

Veshadhariyagi bamdu asurara samharisibusurarigvoravanittyo kesava murari ||1||

Na talalareno lokadhipatiye kayo^^anatharakshaka narayanane murari ||2||

Manasu nilladu deva maranattuligennamanakagi nine baro madhava murari||3||

Aneka govgala kayda gopalamurutigopiyararasa govinda murari ||4||

Kattida kamaneya bittu kalaci mana-dishtarthavaniva vishnu murari ||5||

Madhuravakyagalimda mandirakagi baromanasijanayya madhusudana murari ||6||

Tiddida kasturitilaka tigurida parimalagandhamuddu nasunageya trivikrama murari||7||

Kamini agalibamdu simenaluveànemdunemavakyadi nimda vamana murari ||8||

Sriyarasa meladi ramisi bahukaladisindhusayana sridharane murari ||9||

Rushigaligvaravittu brundavanadalli ninduharushavaridhi hrushikesa murari ||10||

Pavanna muruti paramadayalu ninepaliso sripadmanaba murari||11||

Danavara mardisi sumanasarigolidadanadattane damodarane murari ||12||

Sankeyillade gelisu sankacakrava dhaàrisi a-lankaravada sankarshanane murari ||13||

Seshasayana sadhu sajjanara poshani salavo vasudeva murari ||14||

Idda goperamaneya kaddu benneya meddapadmadalaksha pradyumna murari ||15||

Animishanagi bandu yadavaranella gelida^^A mahamahima aniruddha murari||16||

Punagu kasturigandha parimalapushpadinda punyamuruti purushottamane murari ||17||

Rakshiso ni enna akshayadindalirakshiso avani adhokshaja murari ||18||

Nanena pelali nagenageyalli akshikruravayitu narasimha murari ||19||

Meccide na ninna pakshivahana svamimuccumaregalyako accuta murari ||20||

Janatanadi pogi jarastriyarannu^^odagudi adida janardana murari||21||

Uguralli hiranyakana sili uradalli maleya dharisi^^ubballi mereda upendra murari ||22||

Hiranyakshatanayanandu kareye kambadi bandagaruvadinmdale narahariye murari ||23||

Attadaviya tapasu eshtudinavo svamipattanakagi baro krushnamurari ||24||

Ellara salahida pullalocana svamipaliso srihayavadana murari ||25||
***