by ಗುರುತಂದೆವರದಗೋಪಾಲ ವಿಠಲ
(ಋಜುಗಣದ ಪಟ್ಟಿ)
ಗುರುರಾಜ ಗುರುರಾಜ ನೀ ಕಲ್ಕಿಯಿಂದೊಂದಿತ ಗುರುರಾಜಸುತೇಜನಿಂದೊಂದಿತ ಗುರುರಾಜ ದಾಸನಿಂದೊಂದಿತ ಗುರುರಾಜ ಧರ್ಮನಿಂದೊಂದಿತ ಗುರುರಾಜ ಅಧರ್ಮ ಖಂಡನಿಂದೊಂದಿತ ಗುರುರಾಜ ವರ್ಚಸ್ವಿಯೊಂದಿತ ಗುರುರಾಜ ಖಷಣನಿಂದೊಂದಿತ ಗುರುರಾಜ ಸಾಧುಯಿಂದೊಂದಿತ ಗುರುರಾಜ ಮಹಿಪತಿಯಿಂದೊಂದಿತ ಗುರುರಾಜ ಸದ್ಧರ್ಮಜ್ಞನಿಂದೊಂದಿತ ಗುರುರಾಜ ಧರ್ಮಜನಿಂದೊಂದಿತ ಗುರುರಾಜ ಸಂಪೂರ್ಣನಿಂದೊಂದಿತ ಗುರುರಾಜ ಶುಚೆಯಿಂದೊಂದಿತ ಗುರುರಾಜ ವೈಕೃತನಿಂದೊಂದಿತ ಗುರುರಾಜ ಅಂಜನನಿಂದೊಂದಿತ ಗುರುರಾಜ ಸರ್ಷಪನಿಂದೊಂದಿತ ಗುರುರಾಜ ಖರ್ಪಟನಿಂದೊಂದಿತ ಗುರುರಾಜ ಶ್ರದ್ಧಾಹ್ವನಿಂದೊಂದಿತ ಗುರುರಾಜ ಸಂಧ್ಯಾತನಿಂದೊಂದಿತ ಗುರುರಾಜ ವಿe್ಞÁನದಿಂದೊಂದಿತ ಗುರುರಾಜ ಮಹಾವಿe್ಞÁನನಿಂದೊಂದಿತ ಗುರುರಾಜ ಕೀರ್ತನನಿಂದೊಂದಿತ ಗುರುರಾಜ ಸಂಕೀರ್ಣಾಖ್ಯನಿಂದೊಂದಿತ ಗುರುರಾಜ ಕತ್ಥನಿಂದೊಂದಿತ ಗುರುರಾಜ ಮಹಾಬುದ್ಧಿಯಿಂದೊಂದಿತ ಗುರುರಾಜ ಮಹತ್ತರನಿಂದೊಂದಿತ ಗುರುರಾಜ ಸುವೀರ್ಯನಿಂದೊಂದಿತ ಗುರುರಾಜ ಮೇಧಾವಿಯಿಂದೊಂದಿತ ಗುರುರಾಜ ವಿಜಯನಿಂದೊಂದಿತ ಗುರುರಾಜ ಜಯನಿಂದೊಂದಿತ ಗುರುರಾಜ ರಂತಿಮ್ನನಿಂದೊಂದಿತ ಗುರುರಾಜ ಪ್ರಮೋದನಿಂದೊಂದಿತ ಗುರುರಾಜ ಸಂತಸನಿಂದೊಂದಿತ ಗುರುರಾಜಆನಂದನಿಂದೊಂದಿತ ಗುರುರಾಜ ಸಂತುಷ್ಟನಿಂದೊಂದಿತ ಗುರುರಾಜ ಚಾರ್ವಾಂಗನಿಂದೊಂದಿತ ಗುರುರಾಜ ಚಾರುಯಿನಿಂದೊಂದಿತ ಗುರುರಾಜ ಸುಬಾಹುಯಿನಿಂದೊಂದಿತ ಗುರುರಾಜ ಚಾರುಪದನಿಂದೊಂದಿತ ಗುರುರಾಜ ಸುಲೋಚನನಿಂದೊಂದಿತ ಗುರುರಾಜ ಸಾರಸ್ವತನಿಂದೊಂದಿತ ಗುರುರಾಜ ಸುವೀರನಿಂದೊಂದಿತ ಗುರುರಾಜ ಪ್ರಾಜ್ಞನಿಂದೊಂದಿತ ಗುರುರಾಜ ಕಪಿಯಿಂದೊಂದಿತ ಗುರುರಾಜ ಅಲಂಪಟನಿಂದೊಂದಿತ ಗುರುರಾಜ ಸರ್ವಜ್ಞನಿಂದೊಂದಿತ ಗುರುರಾಜ ಸರ್ವಜಿತನಿಂದೊಂದಿತ ಗುರುರಾಜ ಮಿತ್ರನಿಂದೊಂದಿತ ಗುರುರಾಜ ಪಾಪ ವಿನಾಶಕನಿಂದೊಂದಿತ ಗುರುರಾಜ ಧರ್ಮವಿನೇತನಿಂದೊಂದಿತ ಗುರುರಾಜ ಶಾರದನಿಂದೊಂದಿತ ಗುರುರಾಜ ಓಜನಿಂದೊಂದಿತ ಗುರುರಾಜ ಸುತಪಸ್ವಿಯಿಂದೊಂದಿತ ಗುರುರಾಜ ತೇಜಸ್ವಿಯಿಂದೊಂದಿತ ಗುರುರಾಜ ದಾಸಸುಶೀಲನಿಂದೊಂದಿತ ಗುರುರಾಜ ಯಜ್ಞ ಸುಕರ್ತನಿಂದೊಂದಿತ ಗುರುರಾಜ ಯಜ್ವೀಯಿಂದೊಂದಿತ ಗುರುರಾಜ ಯಾನವರ್ತಕನಿಂದೊಂದಿತ ಗುರುರಾಜ ಪ್ರಾಣನಿಂದೊಂದಿತ ಗುರುರಾಜ ಅಮರ್ಷಿಯಿಂದೊಂದಿತ ಗುರುರಾಜ ಉಪದೇಷ್ಯನಿಂದೊಂದಿತ ಗುರುರಾಜ ತಾರಕನಿಂದೊಂದಿತ ಗುರುರಾಜ ಕಾಲಕೀರ್ತನಿಂದೊಂದಿತ ಗುರುರಾಜ ಸುಕರ್ತನಿಂದೊಂದಿತ ಗುರುರಾಜಸುಕಾಲಜ್ಞನಿಂದೊಂದಿತ ಗುರುರಾಜ ಕಾಲಸುಸೂಚಕನಿಂದೊಂದಿತ ಗುರುರಾಜ ಕಲಿ ಸಂಹರ್ತನಿಂದೊಂದಿತ ಗುರುರಾಜ ಕಲ್ಕಿಯಿಂದೊಂದಿತ ಗುರುರಾಜ ಕಾಲಕನಿಂದೊಂದಿತ ಗುರುರಾಜ ಶ್ಯಾಮರೇತನಿಂದೊಂದಿತ ಗುರುರಾಜ ಸದಾರತನಿಂದೊಂದಿತ ಗುರುರಾಜ ಸುಬಲನಿಂದೊಂದಿತ ಗುರುರಾಜ ಸಹೋಯಿಂದೊಂದಿತ ಗುರುರಾಜ ಸದಾಕೃಷ್ಣಿಯಿಂದೊಂದಿತ ಗುರುರಾಜ e್ಞÁನನಿಂದೊಂದಿತ ಗುರುರಾಜ ದಶಕಲನಿಂದೊಂದಿತ ಗುರುರಾಜ ಶ್ರೋತವ್ಯನಿಂದೊಂದಿತ ಗುರುರಾಜ ಸಂಕೀರ್ತಕನಿಂದೊಂದಿತ ಗುರುರಾಜ ಮಂತವ್ಯನಿಂದೊಂದಿತ ಗುರುರಾಜ ಕವ್ಯನಿಂದೊಂದಿತ ಗುರುರಾಜ ದ್ರಷ್ಟವ್ಯನಿಂದೊಂದಿತ ಗುರುರಾಜ ಸಖ್ಯನಿಂದೊಂದಿತ ಗುರುರಾಜ ಗಂತವ್ಯನಿಂದೊಂದಿತ ಗುರುರಾಜಕ್ರವ್ಯನಿಂದೊಂದಿತ ಗುರುರಾಜಸ್ಮರ್ತನಿಂದೊಂದಿತ ಗುರುರಾಜ ಸ್ತವ್ಯನಿಂದೊಂದಿತ ಗುರುರಾಜ ಸುಭವ್ಯನಿಂದೊಂದಿತ ಗುರುರಾಜ ಸ್ವರ್ಗವ್ಯನಿಂದೊಂದಿತ ಗುರುರಾಜ ಭಾವ್ಯನಿಂದೊಂದಿತ ಗುರುರಾಜ e್ಞÁತವ್ಯನಿಂದೊಂದಿತ ಗುರುರಾಜ ವಕ್ತವ್ಯನಿಂದೊಂದಿತ ಗುರುರಾಜ ಗವ್ಯನಿಂದೊಂದಿತ ಗುರುರಾಜ ಲಾತವ್ಯನಿಂದೊಂದಿತ ಗುರುರಾಜ ವೃಂದಾವನದಾಕಾರನಾಗಿರುವೆ ಗುರುರಾಜ ವಾಯು ಬ್ರಹ್ಮ ಬ್ರಾಹ್ಮಣಪ್ರಿಯನಾಗಿರುವೆ ಗುರುರಾಜಸರಸ್ವತಿ ಪತಿಯಾಗುವೆ ಗುರುರಾಜ ಮಾಂಪಾಹಿ ಮಾಂಪಾಹಿ ಶ್ರೀ ಗುರುರಾಜ ಎಮ್ಮ ಹಿರಿಯರಾಡಿದ ನುಡಿಗಳಿಂದಲೇ ನಿನ್ನ ನಾ ಕೊಂಡಾಡುವೆನೋ ಗುರುರಾಜಎನ್ನಪರಾಧ ಅನಂತ ಕ್ಷಮಿಸು ಕ್ಷಣ ಕ್ಷಣಕೆ ಗುರುರಾಜ ವಾರುಣೀಪತಿ ಬಿಂಬ ಹನುಮ ಭೀಮಾನಂದ ಮುನಿ ನಿಲಯ ಗುರು ತಂದೆ ವರದಗೋಪಾಲವಿಠಲನ ಉದ್ದಂಡ ದೂತ ಎನಗೆ ತಂದೆ ತಾಯಿ ಸಕಲ ಬಂಧು ಬಳಗವು ನೀನೆ ಗುರುರಾಜ ವಂದು ಕಾಣದ ಮಂಗ ನಾನಾದೆಯಿಂದು ಗುರುರಾಜ ಹೊತ್ತು ಹೋಯಿತು ವ್ಯರ್ಥ ನಿನ್ನ ಕಾಣದಲೆ ಎನಗೆ ಗುರುರಾಜ ಯತ್ತಿದ್ದರೇನು ನಿನಗಲ್ಲದವನು ಗುರುರಾಜ ಶ್ರೀ ಮಧ್ವಶಾಸ್ತ್ರವ ತಿಳಿಸಿ ಉದ್ಧರಿಸು ಎನ್ನ ಗುರುರಾಜ ಸದ್ಭಕ್ತರಲಿ ಇಟ್ಟು ಕಾಪಾಡು ಎನ್ನ ಗುರುರಾಜ ತ್ವದ್ಭಕ್ತನಾ ಮಾಡಿಕೊ ತವ ದಾಸ್ಯ ಕೊಟ್ಟೆನಗೆ ಗುರುರಾಜ ಹೇಡಿ ಜೀವನನಾಗಿ ನಾ ನಿನ್ನ ಮರೆತೆ ಗುರುರಾಜ ಏನು ಮಾಡಲು ಒಲಿವೆನೀ ಎನಗೆ ಗುರುರಾಜ ನಾನೆಂಬೊ ಭಗವದ್ರೂಪದಾ ಸಂಸ್ಕøತಿಯ ನೀಡೆಲೊ ಎನಗೆ ಶ್ರೀ ಗುರುರಾಜ ನಾನೆಂಬೊ ಸ್ಮøತಿಯ ನೀಡದಿರೆನಗೆ ಗುರುರಾಜ ನಾನು ನನ್ನದುಯಲ್ಲ ನಿನ್ನ ಪರವಾಗಲಿ ಗುರುರಾಜ ಎಂದು ಶ್ರೀಹರಿಯ ಶಿರಿ ಸಹ ತೋರಿವಿ ಎನಗೆ ಗುರುರಾಜ ಯೆಂದೆಂದು ನೀನೆ ನಿಜ ಬಂಧು ಎನಗೆ ಗುರುರಾಜ ಎಂದೆಂದು ಸ್ಮøತಿಯಲಿ ನೀನಿದ್ದು ತಿಳಿಸುತಿರು ಗುರುರಾಜ ನಿನ್ನ ನಿನ್ನವರಲ್ಲಿ ಯೆಂದೆಂದು ದ್ವೇಷವಾ ಕೊಡದಿರೆನಗೆ ಗುರುರಾಜನಿನ್ನ ಶ್ರೀಪಾದ ರಜದಲ್ಲಿ ನೀ ತೋರು ಎನಗೆ ಗುರುರಾಜ ಶ್ರೀಕೃಷ್ಣಾರ್ಯ ಗುರುವಿನಲ್ಲಿ ನೀ ತೋರು ಎನಗೆ ಗುರುರಾಜ ಸತತ ಎಲ್ಲೆಲ್ಲೂ ಪೊಳೆಯುತಿರು ಎನಗೆ ಗುರುರಾಜ ಯಾಕಿಷ್ಟು ನಿರ್ದಯ ಎನಮ್ಯಾಲೆ ನಿನಗೆ ಗುರುರಾಜ ತಂದೆವರದರಾಜರ ಅತ್ಯಾಪ್ತಸಖನೆಂದು ಸಲಹೋ ಗುರುರಾಜ ಗುರುತಂದೆವರದಗೋಪಾಲವಿಠಲನ ಸಹ ಪರಿವಾರ ಸಹ ಬಂದು ತೋರೆನ್ನ ಮನದಲ್ಲಿ ಗುರುರಾಜ
***