by ಪ್ರಾಣೇಶದಾಸರು
ಇಂಥ ಬುದ್ಧಿಯಲ್ಲಿ ಸೇರಿತೊ ಕೃಷ್ಣ
ಗೋಕುಲದೊಳು ಎಂಥವರೂ ನಿನ್ನ ದೂರು
ಹೇಳುತಿಪ್ಪರೊ ಹೀಗಾದರೆ ನಿಲ್ಲರೋ ಪ
ಗಂಡನುಳ್ಳ ನಾರಿಯರಾ ಮಂದಿಯೆಲ್ಲ ನೋಡ ಬಲು ಉ-
ದ್ದಂಡತನದಲ್ಲಿ ಸೀರೆ ಸೆರಗ ಪಿಡಿವರೇ ಇಂಥ ದುಡುಕು ಮಾಡುವರೇ ||ಚಂಡಾಡುವಾಗೆನ್ನವಸನ ಮರೆತೆ ಕೊಂಡು ಪೋಗಲವಳು |
ಕಂಡು ಕೊಸರಿಕೊಂಡರಿಂಥ ಸುದ್ದಿ ಹುಟ್ಟಿಸಿ ಪೇಳುವಳಮ್ಮ ಹೊಂದಿಸಿ 1
ಹಿರಿಯರುಳ್ಳಾ ಸೊಸೆಯ ಕೂಡ ಒಗೆತನವ ಕೆಡಿಸುವಂತೆ |
ಸರಸವಾಡುವದು ನಿನಗೆ ಸಲ್ಲುವದೇನೋ ಯನಗೆ ಭೂಷಣವೇನೋ ||
ನಿರುತ ಅವಳ ತಾಯಿ ನಂದಗೋಪಗಣ್ಣಾಯೆಂದು ಕರೆಯ- |
ಲರಿತೆನತ್ತೆ ದುಗಳು ನಾದಿನಿಯೆಂದು ಮನಸಿಗೆ ಚರ್ಚೆ ಮಾಡಿದೆನೀ ಬಗೆ2
ಕುಲದೇವತೆಯ ಮೀಸಲು ತುಪ್ಪ ನೆಲವಿನ ಮೇಲಿಟ್ಟಿರಲು ಮದ್ದು |
ಕಲಶವ ಒಡೆದು ಬಾಹುವದೆಲ್ಲ ಚಿನ್ನಾಟವೇನೋ,
ಅವರು ಮುದ್ದಿಸುವರೇನೋ ||
ತಿಳಿಯದೆ ನೆಳಲಿದುಯೆಂದು ಕಳ್ಳನ ಒಳಗಿರಿಸಿಹಳೇಕೆಂದು ವಡದೆ |
ನೆಲಖರಿಧೋಗುವಘೃತನೋಡಲೆ ತಿಂದೆನಮ್ಮಯ್ಯ ತಪ್ಪಿರೆ ಕಟ್ಹ್ಯಾಕು ಕಯ್ಯ 3
ಚಿನ್ನನಂತೆಯಾಗಿಯವರ ಮಗ್ಗುಲೊಳು ಮಲಗಿಯೆಂಥ |
ಸಣ್ಣ ಕೃತ್ಯ ಮಾಡಿ ಬಾಹುವೆಂತಲ್ಲೋ ಕಂದ ಕೇಳುವರಿಗೇನುಛಂದ||
ನಿನ್ನ ಸಲಿಗೆ ಬಹಳ ಕಂಡು ಇಲ್ಲದ್ದೊಂದೆ ಹುಟ್ಟಿಸುವರು |
ಯನ್ನ ದಿಸವಕ್ಕೀ ಜಾರತ್ವ ಕಲಿತಿದ್ದೇನೇನೇ ನಿನಗೇನೂ ತಿಳಿಯದೇನೇ 4
ಕದ್ದು ಮೊಲೆಯುಂಡು ಕರು ಬಿಟ್ಟು ಹರಕೊಂಡಿತು ನೋಡಿರಿ ಎಂಬೆಯಂತೆ |
ದುಗ್ಧವೆಮಾರಿಬಾಳಿವೆ ಮಾಡುವರೆಂತು ತಾಳುವರೋ ಹೀಗಾದರೆ ನಿಲ್ಲರೋ ||
ಇದ್ದಾ ಮನೆಯವರಿಗೆ ನಂಬವು ಅಂಥಾಲಾಳ
ಮೊಲೆಯ ನಾನುಂಡರೆ ಮೋರೆಗೆ |
ಒದ್ದರೆ ರೋದನ ಮಾಡುತ ನಿನ್ನ ಬಳಿಗೊಂದಿನ
ಬಾರೆನೇ ಹುಡುಗರಿಗಂಬುವ ಮಾತೇನೇ 5
ಇಡಲುದಕವ ಬೆರಸಿ ಮಜ್ಜನಕೆ ಛಲದಿಂದಲಿ ಚಲ್ಲಿ ಬಾಹುವರೇ |
ಬಡಿವೆನೊ ನಾ ತಾಳದೆ,
ಮುದ್ದಾದರೆ ಮತ್ತೊಮ್ಮೆಯುಣಬೇಕು ಆಡುತ ಮನೆಯೊಳಗಿರಬೇಕು ||
ಹುಡುಗರ ಸಂಗಡ ಅಣ್ಣನೂ ನಾನೂ ಇದ್ದೆವೆ, ಅಲ್ಲಾಕೆಯ ಮೊಮ್ಮಗನು |
ಗಡಿಗೆಯ ಉರುಳಿಸೆ ನಾ ಕಂಡವರಿಗೆ ಹೇಳಿದೆನೆ
ಇಷ್ಟಾ ಯನ್ನನು ಕಾಡುವದದೃಷ್ಟಾ 6
ಎದೆಗಳ ಮುಟ್ಟುವದೇಕೋ ಎರಕೊಂಬುವರಲ್ಲಿಗೆ ಪೋಗಿಯಿನ್ನನ್ನಾ |
ಹದದಿಂದಲೆ ಯಿರು ಶಿಕ್ಷೆಯ ಮಾಳ್ಪೆ ಎಚ್ಚರಿಕೆಯಿರಲಿ
ಕಾಲ್ಪಡಿದರೆ ಬಿಡೆನೋ ಮರಳಿ ||
ಮುದದಿಂದಲಿ ಚಂಡೊಗೆಯಲು ಅವಳಾ ಬಚ್ಚಲಿಯೊಳು ಬಿತ್ತು ತಕ್ಕೊಂಡೇ |
ಹದ ತಪ್ಪಿದರೀ ಹೆಂಗಸರೆಲ್ಲಾ ಪ್ರಾಣೇಶ ವಿಠಲನಾಣೇ ಸುಳ್ಳಲ್ಲವು ಕಾಣೇ 7
*******