Showing posts with label ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ mahipati. Show all posts
Showing posts with label ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ mahipati. Show all posts

Wednesday, 11 December 2019

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ankita mahipati

ಭೈರವಿ ರಾಗ ತೀನ್ ತಾಳ

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ
ಏಕಾಕಾರದಲೆನ್ನ ಹೊರಿಯಲಾರೇನಯ್ಯ ||ಪ||

ನೀರ ತೆರೆಯ ಕಡಿದು ಹೃದಯಕ ಸ್ವರಣದಿ
ಭರದಿ ಮುಣುಗಿ ನೀರ ನಡಿಗಿ ದಣಿದೇನಯ್ಯ ||೧||

ವಾರಿಧಿ ಮಥನದಿ ಮೇರುಪರ್ವತವನ್ನು
ಭಾರ ಬೆನ್ನಿಲಿ ಪೊತ್ತು ಬೆವರಿ ದಣಿದೇನಯ್ಯ ||೨||

ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ
ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ ||೩||

ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ
ಕರುಳ್ವನಮಾಲೆಯ ಧರಿಸಿ ದಣಿದೇನಯ್ಯ ||೪||

ಧರಿಯ ಮೂರಡಿ ಮಾಡಿ ಎರೆದು ದಾನವ ಬೇಡಿ
ನರನ ಪಾತಾಳಕೊತ್ತಿ ಬೆಳೆದು ದಣಿದೇನಯ್ಯ ||೫||

ಹಿರಿಯಳ ಶಿರವನು ಹರಿದು ಕತ್ತರಿಸಿತ್ತು
ಕರದಲ್ಲಿ ಪರಶುವ ಪಿಡಿದು ದಣಿದೇನಯ್ಯ ||೬||

ಶಿರಗಳ ಚೆಂಡಾಡಿ ರಾವಣೇಂದ್ರಜಿತನೆ
ಶರದಿ ಕುಂಭಕರ್ಣನ ಎಚ್ಚು (?) ದಣಿದೇನಯ್ಯ ||೭||

ತುರುಗಳ ಕಾಯಿದು ಉರುಗನ ತುಳಿದಿತ್ತು
ಗಿರಿಯ ಬೆರಳೆತ್ತಿ ತೋರಿ ದಣಿದೇನಯ್ಯ ||೮||

ಬರಿಯ ಬತ್ತಲೆ ಆಗಿ ಅರಿಯದೆ ತ್ರಿಪುರವ
ಸೇರಿ ನಾರೇರ ವ್ರತವಳಿದು ದಣಿದೇನಯ್ಯ ||೯||

ಏರಿ ಕುದುರೆಯ ತಿರುಹುರಾಹುತನಾಗು
ಪರಿಪರಿ ರೂಪವ ತಾಳಿ ದಣಿದೇನಯ್ಯ ||೧೦||

ಸರ್ವಾಪರಾಧವು ಕ್ಷಮೆಯಿಂದ ಮಹಿಪತಿಯ
ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ ||೧೧||
****

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಪ  


ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 

ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 

ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 

ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 

ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 

ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 

ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 

ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 

ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 

ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 

ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11

****