Showing posts with label ಶಾಶ್ವತ ಭಾಗವತರು ನಗರೆ ಮತಿಮಿಶ್ರರ prasannavenkata. Show all posts
Showing posts with label ಶಾಶ್ವತ ಭಾಗವತರು ನಗರೆ ಮತಿಮಿಶ್ರರ prasannavenkata. Show all posts

Sunday, 17 November 2019

ಶಾಶ್ವತ ಭಾಗವತರು ನಗರೆ ಮತಿಮಿಶ್ರರ ankita prasannavenkata

by ಪ್ರಸನ್ನವೆಂಕಟದಾಸರು
ಶಾಶ್ವತ ಭಾಗವತರು ನಗರೆ ಮತಿಮಿಶ್ರರ ನೋಡಿ ಕೈ ಹೊಡೆದು ಪ.

ಮಾಧವನಲ್ಲದೆ ಆ ದೈವೀದೈವಾದಿಗಳ ಹಿರಿಯರು ನಂಬರುಆದರವರ ಬಿಟ್ಟರೆ ಈ ಧನಧಾನ್ಯವುಹೋದರೆ ಕೆಟ್ಟೆವೆಂಬರ ನೋಡಿ 1

ಕೃಷ್ಣನೆ ಸುಖದಾಯಕನಿರೆ ಸತಿಯಳುಹುಟ್ಟಿದ ಶಿಶುವಿನ ದೆಸೆಯಿಂದ ಎನ್ನಕಷ್ಟವೆ ಹೋಯಿತು ತುಷ್ಟಿಯೊಳಿಹೆನುಸೃಷ್ಟಿಗೆ ನಾ ಸುಖಿಯೆಂಬನ ನೋಡಿ 2

ನಾರಾಯಣ ದಾತಾರನು ವಿಶ್ವಕೆತೋರುತಿರಲು ನರಧನಿಕರನುಆರಾಧಿಸಿ ನಾಭೂರಿಧನಾಢ್ಯನುಆರೆನಗೆದುರಿಲ್ಲೆಂಬನ ನೋಡಿ 3

ಶ್ರೀ ಗುರುವರ ಸುಖಯೋಗಿಯ ಸಂತತಿಯೋಗಿಗಳಂಘ್ರಿಯ ನಂಬಿರದೆಆಗುರುಈ ಗುರುವೇ ಗತಿಯೆನುತಲಿಭೂಗುರುವಾಗಿಹ ರೋಗಿಯ ನೋಡಿ 4

ಬೂಟಕತೋಟಕ ಭಕುತಿಗೆ ದ್ವಾದಶಗೂಟಬರೆಗೆ ಬುಧರೊಪ್ಪುವರೆ ಜಗನ್ನಾಟಕ ಪ್ರಸನ್ವೆಂಕಟೇಶನ ಗುಣಗಣಭಟರೆನಿಪ ವೈಷ್ಣವರಹ ಸಜ್ಜನ 5
******