ನೀಲಕಂಠಧರಾ ಪಾಲಿಸು ಎನ್ನ ನೀಲಕಂಠಧರಾ ಪ
ಕೀಳು ಸುರರು ತಾವು ತಾಳದೆ ಬಿಟ್ಟಿಹ
ಕಾಳಕೂಟವನು ತಾಳಿದ ಧೀರಾ ಅ.ಪ
ಇಂದುಶೇಖರಾ ನಮಿಸುವೆÀ ನಿನ್ನ
ನಂದಿಯ ತೇರಾ
ಇಂದ್ರವಂದ್ಯಹರ ಮಂದಾಕಿನಿ ಧರ
ಗೊಂದೆವಳವಿಗೆ ಮುಕುಂದನ ದಾಸ 1
ಶಂಭೋ ಮಹಾದೇವ ಭಜಿಸುವ ಭಕುತಕ -
ದಂಬವ ಕಾವ
ವಂದಿಪ ಜನಕಾ - ನಂದ ನೀಡುವ ಗೋ -
ವಿಂದನ ನಿಜಮನ ಮಂದಿರದಲಿ ತೋರೋ 2
ಭೂತನಾಥನೆ ಗುರುಜಗನ್ನಾಥವಿಠಲ ದೂತನೆ
ಪಾತಕರಾಶಿಯ ಘಾತಿಸು ತ್ರಿಪುರಾ -
ರಾತಿಯೆ ನಿನ್ನಲಿ ಪ್ರೀತಿಯ ಸಲಿಸೋ 3
***