Showing posts with label ನರಸಿಂಹಾ ಲಕ್ಷ್ಮೀನರಸಿಂಹ ನಮಿಸುವೆ ankita simhavittala. Show all posts
Showing posts with label ನರಸಿಂಹಾ ಲಕ್ಷ್ಮೀನರಸಿಂಹ ನಮಿಸುವೆ ankita simhavittala. Show all posts

Saturday, 22 May 2021

ನರಸಿಂಹಾ ಲಕ್ಷ್ಮೀನರಸಿಂಹ ನಮಿಸುವೆ ankita simhavittala

ಶ್ರೀಮತಿ ಓರೆಬಾಯಿ ಲಕ್ಷ್ಮೀದೇವಮ್ಮನವರ ಕೃತಿ

 

ರಾಗ -  :  ತಾಳ -


ನರಸಿಂಹಾ ಲಕ್ಷ್ಮೀನರಸಿಂಹ ll ಪ ll


ನಮಿಸುವೆ ಲಕ್ಷ್ಮೀನರಸಿಂಹ ಆಹಾ ಕನಕಕಶ್ಯಪನಳಿದು

ಜನಕೆ ಸುಖವನಿತ್ತು ಘನಪುರುಷನೆ ಕ್ಷಣ ಕ್ಷಣ ನಮಿಸುವೆ ll ಅ ಪ ll


ಪುಟ್ಟ ಪ್ರಹ್ಲಾದನ ಮೊರೆಯ l ಕೇಳಿ 

ಅಟ್ಟಹಾಸದಿ ಕಂಭಸಿಡಿದೂ l ಬಲು

ಸಿಟ್ಟಿನಿಂದಲಿ ಹಲ್ಲು ಕಡಿದೂ l ಆಹಾ

ಕಟ್ಟುಗ್ರತನದ ಕೆಟ್ಟ ಹಿರಣ್ಯನ 

ಹೊಟ್ಟೆಯ ಬಗೆದಂಥ ಶ್ರೇಷ್ಠಮಹಿಮನೆ ll 1 ll


ಕಂಡು ಹಿಡಿದು ಅವನ ರೆಟ್ಟೆ l ಎಳೆತಂದೂ

ತೊಡೆಯ ಮೇಲಿಟ್ಟೆ l ಬಹು

ಕೆಂಡ ಕೋಪದಿ ಅವನ ಹೊಟ್ಟೆಯಸೀಳಿದ 

ಸೊಂಡೂರು ಪುರಮಧ್ಯ ಗುಂಡಿ ನರಸಿಂಹನ 

ಕಂಡೆ ಈ ದಿನ ll 2 ll


ಸೂರಿಗಳರಸ ಒಡೆಯಾ l ಮೇಲೆ

ಸುರಸೋದರರೊಳುಮೆರೆಯ l ಆಹಾ 

ಕ್ರೂರ ದೈತ್ಯನ ಕೊರಳಹರಿದ ಅ

ಪಾರ ಮಹಿಮಸಿರಿ ಸಿಂಹವಿಟ್ಠಲ

*****