ತತ್ತ್ವಸುವಾಲಿ
ಶ್ರೀ ತುಲಸೀಸ್ತುತಿ ಬೃಂದಾವನಿ ಜನನಿ ವಂದಿಸುವೆ ಸತತ ಜಲಂಧರನ ರಾಣಿ ಕಲ್ಯಾಣಿ |
ಕಲ್ಯಾಣಿ ತುಳಸಿನಿಜ ಮಂದಿರೆ ಎನಗೆ ದಯವಾಗೆ || ೨೯ ||
ಜಲಜಾಕ್ಷನಮಲಕಜ್ಜಲಬಿಂದು ಪೀಯೂಷಕಲಶದಲಿ ಬೀಳೆ ಜನಿಸಿದಿ | ಜನಿಸಿ ಹರಿಯಿಂದ ಶ್ರೀತುಲಸಿ ನೀನೆಂದು ಕರೆಸಿದಿ || ೩೦ ||
ಶ್ರೀತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ ನಾ ತುತಿಸಿ ಕೈಯ ಮುಗಿವೆನು | ಮುಗಿವೆ ಎನ್ನಯ ಮಹಾಪಾತಕವ ಕಳೆದು ಪೆರೆಯಮ್ಮ || ೩೧ ||
ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ಕಲುಷಕರ್ಮಗಳ ಎಣಿಸದೆ | ಎಣಿಸದೆ ಸಂಸಾರ- ಜಲಧಿಯಿಂದೆಮ್ಮ ಕಡೆಹಾಯ್ಸು || ೩೨ ||
ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂ- ಡಾಡಿದವ ನಿತ್ಯ ಹರಿಪಾದ | ಹರಿಪಾದಕಮಲಗಳ ಕೂಡಿದವ ಸತ್ಯ ಎಂದೆಂದು || ೩೩ ||
ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ ವಂದ್ಯರಾಗುವರು ಜಗದೊಳು || ೩೪ ||
ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮಿನಿಲಯನಂಘ್ರಿಗಳ ಪೂಜಿಪ | ಪೂಜಿಪರಿಗೆ ಪರಮಮಂಗಲದ ಪದವಿತ್ತು ಸಲಹುವಿ || ೩೫ ||
ಶ್ರೀತುಳಸಿದೇವಿ ಮನ್ಮಾತ ಲಾಲಿಸು ಜಗನ್ನಾಥವಿಠ್ಠಲನ ಚರಣಾಬ್ಜ |
ಚರಣಾಬ್ಜ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ || ೩೬ ||
***
तत्त्वसुवालि
श्री तुलसीस्तुति बृंदावनि जननि वंदिसुवे सतत जलंधरन राणि कल्याणि ।
कल्याणि तुळसिनिज मंदिरे एनगे दयवागे ॥ २९ ॥
जलजाक्षनमलकज्जलबिंदु पीयूषकलशदलि बीळे जनिसिदि । जनिसि हरियिंद श्रीतुलसि नीनेंदु करेसिदि ॥ ३० ॥
श्रीतरुणिवल्लभन प्रीतिविषयळे निन्न ना तुतिसि कैय मुगिवेनु । मुगिवे एन्नय महापातकव कळेदु पेरेयम्म ॥ ३१ ॥
तुलसि निन्नडिगे ना तलेबागि बिन्नैपे कलुषकर्मगळ एणिसदे । एणिसदे संसार- जलधियिंदेम्म कडेहाय्सु ॥ ३२ ॥
नॊडिदव दुरित ईड्याडिदव निन्न कों- डाडिदव नित्य हरिपाद । हरिपादकमलगळ कूडिदव सत्य एंदेंदु ॥ ३३ ॥
निंदिसिदवरेल्ल निंद्यरागुवरु अभिवंदिसिद जनरु सुररिंद । सुररिंद नररिंद वंद्यरागुवरु जगदोळु ॥ ३४ ॥
कलुषवर्जिते निन्न दळगळिंदलि लक्ष्मिनिलयनंघ्रिगळ पूजिप । पूजिपरिगे परममंगलद पदवित्तु सलहुवि ॥ ३५ ॥
श्रीतुळसिदॆवि मन्मात लालिसु जगन्नाथविठ्ठलन चरणाब्ज ।
चरणाब्ज एन्न हृत्पद्मदलि नी तॊरे कृपेयिंद ॥ ३६ ॥
tattvasuvAli
SrI tulasIstuti bRuMdAvani janani vaMdisuve satata jalaMdharana rANi kalyANi |
kalyANi tuLasinija maMdire enage dayavAge || 29 ||
jalajAkShanamalakajjalabiMdu pIyUShakalaSadali bILe janisidi | janisi hariyiMda SrItulasi nIneMdu karesidi || 30 ||
SrItaruNivallaBana prItiviShayaLe ninna nA tutisi kaiya mugivenu | mugive ennaya mahApAtakava kaLedu peÇreyamma || 31 ||
tulasi ninnaDige nA talebAgi binnaipe kaluShakarmagaLa eNisade | eNisade saMsAra- jaladhiyiMdemma kaDehAysu || 32 ||
nODidava durita IDyADidava ninna koM- DADidava nitya haripAda | haripAdakamalagaLa kUDidava satya eMdeMdu || 33 ||
niMdisidavarella niMdyarAguvaru aBivaMdisida janaru surariMda | surariMda narariMda vaMdyarAguvaru jagadoLu || 34 ||
kaluShavarjite ninna daLagaLiMdali lakShminilayanaMGrigaLa pUjipa | pUjiparige paramamaMgalada padavittu salahuvi || 35 ||
SrItuLasidEvi manmAta lAlisu jagannAthaviThThalana caraNAbja |
caraNAbja enna hRutpadmadali nI tOre kRupeyiMda || 36 ||
***