Showing posts with label ಬಾರಮ್ಮ ಬಾರೆ ಹರನರ್ಧಾಂಗೀ ankita nagesha shayana ಚೈತ್ರಗೌರೀ ಹಾಡು BARAMMA BARE HARANARDHANGI. Show all posts
Showing posts with label ಬಾರಮ್ಮ ಬಾರೆ ಹರನರ್ಧಾಂಗೀ ankita nagesha shayana ಚೈತ್ರಗೌರೀ ಹಾಡು BARAMMA BARE HARANARDHANGI. Show all posts

Thursday, 29 April 2021

ಬಾರಮ್ಮ ಬಾರೆ ಹರನರ್ಧಾಂಗೀ ankita nagesha shayana ಚೈತ್ರಗೌರೀ ಹಾಡು BARAMMA BARE HARANARDHANGI

 AUDIO - PLEASE REFER BHAGYADA LAKSHMI BARAMMA DEVARANAMA SONG

ಚೈತ್ರಗೌರೀ ಹಾಡು ||

ಅಂಕಿತ  ಶ್ರೀ ನಾಗೇಶ ಶಯನ || 

( ಭಾಗ್ಯಾದ ಲಕ್ಷ್ಮೀ ಬಾರಮ್ಮ ಹಾಡಿನ ಥರ ಧಾಟಿ ) 

ಬಾರಮ್ಮ ಬಾರೆ ಹರನರ್ಧಾಂಗೀ | ಕಾರುಣ್ಯ ಪಾಂಗೀ |

ಬಾರಮ್ಮ ಬಾರೆ ಹರನರ್ಧಾಂಗೀ ॥ ಪ ॥ 

॥1॥ ಚೈತ್ರ ಶುದ್ಧದ ತದಿಗೆಯ ದಿನದಲಿ |

ಮಿತ್ರೆ ನಿನ್ನನು ಆಹ್ವಾನಿಸುತಲಿ ||

ಅರ್ಥಿಯಿಂದ ಸ್ಥಾಪಿಸುತಲಿ  ತಿಂಗಳ |

ಹೊತ್ತಿಲಿ ನಿನ್ನನು ಪೂಜಿಪೆ ಷರುಷದಿ ॥1॥ 

॥2॥ ಮರಳಿನೈದು ಕೊಂತಿಗಳನು ಮಾಡಿ |

ಹರಿದ್ರಾ ಕುಂಕುಮ ಗಂಧವ ತೀಡಿ || 

ಕರಿಮಣಿಗಳ ಮಾಂಗಲ್ಯವ ನೀಡಿ |

ಅರಳು ಮಲ್ಲಿಗೆಯ ಮಾಲೆಯ ಮುಡಿಸುವೆ ॥2॥ 

॥3॥ ಓಕುಳಿ ಕಲಶವ ತುಂಬುತಲಿಡುವೆ |

ಜೋಕೆಯಿಂದ ದೀವಿಗೆ ಹಚ್ಚಿಡುವೆ ||

ಪಾಕ ಭಕ್ಷ್ಯ ನೈವೇದ್ಯವ ಮಾಡುವೆ |

ಸ್ವೀಕರಿಸಮ್ಮ ಆರುತಿ ಬೆಳಗುವೆ ॥3॥ 

॥4॥ ಪಾನಕ ಕೋಸಂಬರಿಯು ಮಜ್ಜಿಗೆ |

ಜಾಣೆ ತ್ರಿಪುರ ಸುಂದರಿಗೆಲೆ ಅಡಿಕೆ || 

ಜೇನುತುಪ್ಪ ಮಾವಿನ ಫಲವಿಡುವೆ |

ಜಾನಕಿಕಾಂತನ ಮನದಲಿ ನೆನೆವೆ॥4॥ 

॥5॥ ಸ್ವಚ್ಚವಾದ ಧಾನ್ಯಗಳನ್ನು ತುಂಬಿ |

ಬಿಚ್ಚೋಲಿಯು ಕರಿಮಣಿಗಳ ಹಾಕಿ ||

ಹಚ್ಚ ಹಸುರಿನ ವಸ್ತ್ರಗಳಿರಿಸಿ |

ಮುಚ್ಚು ಮರದಬಾಗಿನಗಳ ಕೊಡುವೆನು ॥5॥ 

॥6॥ ಶುಕ್ರ ಮಂಗಳಾವಾರಗಳಲ್ಲಿ |

ಅಕ್ಕರೆಯಿಂದ ಸುವಾಸಿನಿಯರಿಗೆ ||

ಸಕ್ಕರೆ ಕ್ಷೀರ ಪಕ್ವಾನ್ನವ ನುಣಿಸಿ |

ಅಕ್ಕ ಪಾರ್ವತೀ ನಿನಗರ್ಪಿಸುವೆನು ॥6॥ 

॥7॥ ತಿಂಗಳು ಮೀರಲು ಅಂಗನೆ ನಿನ್ನಯ |

ಹೊಂಗಳಶವ ಕೊಂತಿಗಳ ಸಮೇತ ||

ಮಂಗಳ ಜಲದಿ ವಿಸರ್ಜಿಸಿ ಶ್ರೀಹರಿ |

ರಂಗ ನಾಗೇಶ ಶಯನ ಗರ್ಪಿಸುವೆ ॥7॥ 

ಶ್ರೀ ಚೈತ್ರ ಗೌರೀ ಹಾಡು ಸಂಪೂರ್ಣಮ್ ||

ಶ್ರೀ ಕೃಷ್ಣಾರ್ಪಣ ಮಸ್ತು ||

******