..
ಸ್ವಸ್ತೀ ಶ್ರೀ ಜಯಮಂಗಳಂ
ಸ್ವಸ್ಥ ಚಿತ್ತದಿ ಹರಿಯ ಭಜಿಪಗೆ
ಹಸ್ತಿ ವರದನ ದಾಸವರ್ಯಗೆ
ಹಸ್ತದಿಂದಖಿಳಾರ್ಥ ದಾತಗೆ
ಸ್ವಸ್ತಿಕರ ಗುರುರಾಘವೇಂದ್ರಗೆ 1
ನತಿಪಜನ ಸುರಧೇನು ಎನಿಪಗೆ
ಸತತ ಸ್ವಾಶ್ರೀತ ಪಾಲಗೆ
ವಿತತ ಸನ್ಮತಿದಾತ ಖ್ಯಾತಗೆ
ತುತಿಪರನುದಿನ ಪೊರೆವೊ ನಾಥಗೆ 2
ಪಾತಕಂಬುಧಿಕುಂಭಜಾತಗೆ
ಪಾತಕಾದ್ರಿ ಕುಲಿಶರೂಪಗೆ
ದಾತ ಗುರುಜಗನ್ನಾಥವಿಠಲ
ದೂತ ಜನಕತಿ ಪ್ರೀತಗೆ 3
***
ಸ್ವಸ್ತಿ ಶ್ರೀ ಜಯ ಮಂಗಳಂ | ಸ್ವಸ್ತಿ ಶ್ರೀ ಜಯ ಮಂಗಳಂ || pa ||
ಸ್ವಸ್ಥಚಿತ್ತದಿ ಹರಿಯ ಭಜಿಪಗೆ
ಹಸ್ತಿದಿಂದಖಿಳಾರ್ಥ ದಾತಗೆ
ಸ್ವಸ್ತಿಕರ ಗುರುರಾಘವೇಂದ್ರಗೆ
ಸ್ವಸ್ತಿಕರ ಗುರುರಾಘವೇಂದ್ರಗೆ || 1 ||
ನತಿಪಜನ ಸುರಧೇನು ಎನಿಪಗೆ
ಸತತ ಸ್ವಾಶ್ರಿತ ಪಾಲಗೆ
ವಿತತ ಸನ್ಮತಿದಾತ ಖ್ಯಾತಗೆ
ತುತಿಪರನುದಿನ ಪೊರೆವೊ ನಾಥಗೆ || 2 ||
ಪಾತಕಾಂಬುಧಿಕುಂಭಜಾತಗೆ
ಪಾತಕಾದ್ರಿಕುಲಿಶರೂಪಗೆ
ದಾತ ಗುರುಜಗನ್ನಾಥವಿಠಲ
ದೂತ ಜನಕತಿ ಪ್ರೀತಗೆ || 3 ||
***
Svasti śrī jaya maṅgaḷaṁ | Svasti śrī jaya maṅgaḷaṁ || pa ||
svasthacittadi hariya bhajipage hastidindakhiḷārtha dātage svastikara gururāghavēndrage svastikara gururāghavēndrage || 1 ||
natipajana suradhēnu enipage satata svāśrita pālage vitata sanmatidāta khyātage tutiparanudina porevo nāthage || 2 ||
pātakāmbudhikumbhajātage pātakādrikuliśarūpage dāta gurujagannāthaviṭhala dūta janakati prītage || 3 ||
***