Showing posts with label ಶ್ರೀಕರಗ್ರಹ ಎನ್ನ ಸಾಕಲಾರದÉ ಹೀಗೆ gopalakrishna vittala. Show all posts
Showing posts with label ಶ್ರೀಕರಗ್ರಹ ಎನ್ನ ಸಾಕಲಾರದÉ ಹೀಗೆ gopalakrishna vittala. Show all posts

Monday 2 August 2021

ಶ್ರೀಕರಗ್ರಹ ಎನ್ನ ಸಾಕಲಾರದÉ ಹೀಗೆ ankita gopalakrishna vittala

ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ

ನೂಕಿ ಬಿಡುವುದು ನ್ಯಾಯವೆ ಪ.


ಬೇಕೆಂದು ನಿನ್ನ ಪದ ನಾ ಕಾಣ ಬಂದರೆ

ಈ ಕಪಟತನವು ಸರಿಯೆ ಹರಿಯೆ ಅ.ಪ.

ಎಲ್ಲರನು ಸಲಹಿದಂತೆನ್ನ ನೀ ಸಲಹೆನ

ನಿಲ್ಲದೆ ನೀರ ಪೊಗುವೆ

ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು

ಕಲ್ಲಡೀ ಅವಿತುಕೊಳುವೆ

ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು

ಹಲ್ಲು ಕೋರೆಯ ತೋರುವೆ

ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ

ಸೊಲ್ಲು ಕೇಳುವರನರಿಯೆ | ದೊರೆಯೆ 1

ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು

ಘುಡು ಘುಡಿಸಿಕೊಂಡು ಬರುವೆ

ಬಡವನೋ ನಾನು ನಿನ್ನಡಿಯನೇ ನೀಡೆನಲು

ಹುಡುಗತನದಲಿ ಬೇಡುವೆ

ತಡೆಯಲಾರೆನೊ ಭವದ ದಡವ ಸೇರಿಸು ಎನಲು

ಕೊಡಲಿಯ ಪಿಡಿದು ಬರುವೆ

ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು

ಅಡವಿ ಅಡವಿಯ ತಿರುಗುವೆ | ಥರವೇ 2

ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು

ಮುತ್ತ್ಯದೊರೆ ಎಂದೆನ್ನುವೆ

ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ

ಬತ್ತಲೆ ನೀ ನಿಲ್ಲುವೆ

ಎತ್ತ ಪೋದರು ಬಿಡೆನೊ ಭೃತ್ಯ ನಾ ನಿನಗೆನಲು

ಹತ್ತಿ ಕುದುರೆಯ ಓಡುವೆ

ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು

ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3

ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ

ಅರಿಯೆ ನಾನದರ ಮಹಿಮೆ

ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು

ಕರೆಕರೆಗೊಳಿಸುವರೆ

ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ

ಉರುತರದ ಭಯವೇತಕೆ

ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ

ದೊರೆಯೆ ನೀ ಸಲಹ ಬೇಕೋ | ಸಾಕೋ4

ಆಪಾರ ಮಹಿಮನೆ ಆರ್ತಜನ ರಕ್ಷಕ

ಪಾಪಿ ನಾನಿಹೆನೋ ಈಗ

ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ

ಶ್ರೀ ಪತಿಯೆ ನೀನೆ ತೋರೊ

ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ

ಕೃಪಾದಿಂದೀಕ್ಷಿಸೋ

ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ

ಕಾಪಾಡುವವರನರಿಯೆ ದೊರೆಯೆ 5

****