Showing posts with label ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ramadasa. Show all posts
Showing posts with label ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ramadasa. Show all posts

Sunday, 5 September 2021

ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ankita ramadasa

 ರಾಮದಾಸರು

ರಾಮ ನಿಮ್ಮ ನಾಮಧ್ಯಾನ ಜಿಹ್ವೆ ಮೇಲೆ ನಿಲಿಸು ಪ 

ಜಗದಭಿಮಾನ ಬಿಡಿಸಿ ಸುಗುಣ ಸಂತಸಂಗ ಪಾಲಿಸಿ ಸುಗುಣಾಂತರಂಗ ನಿನ್ನ ಸಗುಣ ಪೊಗಳಿಸೆನ್ನ ಮುಖದಿ 1 

ಮದಮತ್ಸರಗಳನು ಬಿಡಿಸಿ ಸದಮಲ ಜ್ಞಾನಾನಂದದಿರಿಸಿ ಸದಮಲಾತ್ಮ ನಿಮ್ಮ ಮೂರ್ತಿ ಸದಾಯೆನ್ನ ನೇತ್ರದೊಳ್ನಿಲಿಸು 2 

ಕಾಮಿತಂಗಳ ಕಡೆಹಾಯ್ಸಿ ಭೂಮಿ ಸೀಮೆ ಮೋಹ ತೊರೆಸಿ ಸ್ವಾಮಿ ಮಮಪ್ರಾಣದಾರ್ಯ ಶ್ರೀ ರಾಮದಾಸನೆನಿಸು ಒಲಿದು 3

***