..
kruti by pradyumna teertha ಪ್ರದ್ಯುಮ್ನತೀರ್ಥರು
ಗುರುರಾಜರ ನಂಬಿರೋ ಸಾರುವೆ ನಾ
ಸಾರುವೆ ನಾ ಸಾರುವೆ ನಾ ಪ
ಗುರು ವಾದಿರಾಜರ ಚರಣ ಸ್ಮರಣೆಯಿಂದ
ದುರಿತ ರಾಶಿಗಳೆಲ್ಲ ಪರಿಹಾರವಾಗುವುದು ಅ.ಪ
ಕರುಣಾಸಾಗರರಿವರು ಸ್ಮರಿಪರಘ ಸ್ಮರಿಸದೆ ಪರತತ್ವವರಿದು
ಬಾರಿ ಬಾರಿಗೊದಗಿದಪಾರ ಸಂಶಯ
ದೂರಗೈಸಿ ಮುರಾರಿ ಚರಣವ ತೋರ್ಪ
ಸುರರಿಗೆ ಮರುತರೆನಿಪರು ಬರುÀವ ಕಲ್ಪಕೆ 1
ಗುರು ವಾದಿರಾಜರೆಂಬ ಸುರತರು
ಇರುವುದು ಸೋದಾಪುರದಿ
ಅರಿತು ನಿರುತದಿ ಪರಮ ಭಕುತಿಯಲಿ
ಸೇರಿ ಸೇವೆಯ ಮಾಳ್ವ ಸುಜನಕೆ
ಬೀರುವರು ಪುರುಷಾರ್ಥಗಳನು
ಪಾರುಗಾಣರು ಸುರರು ಮಹಿಮೆಯ 2
ಉಪಚಾರವಲ್ಲವಿದು ಶ್ರೀಪತಿಯಾಣೆ
ಗುಪಿತದಿಂದಿವರ ಮಂತ್ರ
ಜಪಿಸಿ ಭೂತರಾಜರೆಂಬೊರು
ತಾಪಹಾರಕರಾಗಿ ಸುಜನಕೆ
ತಪವ ಮಾಳ್ವರು ರುದ್ರ ಪದವಿಗೆ
ಶ್ರೀ ನರಹರಿ ಪಾದ ಇವರಲಿ 3
***