ankita ಹರಿಕಡಲಗಿರೀಶ
ರಾಗ: [ಅಭೋಗಿ] ತಾಳ: [ರೂಪಕ]
ರಾಘವೇಂದ್ರ ಗುರುವೇ ಬೇಗ ಬಾರೊ ದೊರೆಯೆ
ಕೂಗಿ ಕೂಗಿ ಕರೆವೆ ಬಾಗಿ ಕರಮುಗಿವೆ ಪ
ಮದಡ ನಾನಯ್ಯ ಮುದವ ಬೀರಯ್ಯ
ಪದುಮಾಕ್ಷ ಮಾಲೆಯ ಧರಿಸಿದ ಕಾಯಾ 1
ದೀನ ಜನರ ತಾತ ಜ್ಞಾನ ಪ್ರದಾತ
ದಾನವ ಕುಲಜಾತ ಮಂತ್ರನಿಕೇತ 2
ನರಹರಿಯ ತೋರಿ ತುರಿಯಾಶ್ರಮ ಧಾರಿ
ಹರಿಕಡಲಗಿರೀಶನ ಭಜಕರೆಂದು ಹೊಡೆದು ಭೇರಿ 3
***