Showing posts with label ಕೇಶವ ಕೃಷ್ಣ vijaya vittala ankita suladi ಅನಂತ ದೇವ ಮಹಿಮೆ ಸುಳಾದಿ KESHAVA KRISHNA ANANTA DEVA MAHIMA SULADI. Show all posts
Showing posts with label ಕೇಶವ ಕೃಷ್ಣ vijaya vittala ankita suladi ಅನಂತ ದೇವ ಮಹಿಮೆ ಸುಳಾದಿ KESHAVA KRISHNA ANANTA DEVA MAHIMA SULADI. Show all posts

Sunday 8 December 2019

ಕೇಶವ ಕೃಷ್ಣ vijaya vittala ankita suladi ಅನಂತ ದೇವ ಮಹಿಮೆ ಸುಳಾದಿ KESHAVA KRISHNA ANANTA DEVA MAHIMA SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಅನಂತ ದೇವರ ಮಹಿಮೆ ಸುಳಾದಿ 
(ತಿರುವಟ್ಟಾರ್ ಕ್ಷೇತ್ರದ ತಾಮ್ರಪರ್ಣಿ ನದಿಗೆ ಹತ್ತಿರವಾದಂತಹ ಆದ್ಯನಂತಶಯನ ದೇವರನ್ನು ಕುರಿತು ದಾಸರು ತಮ್ಮ ದಕ್ಷಿಣ ತೀರ್ಥಕ್ಷೇತ್ರ ಮಹಿಮಾ ಸುಳಾದಿಗಳಲ್ಲಿ ತಿಳಿಸಿರುವ ಕ್ಷೇತ್ರ ಇದಾಗಿದೆ.
ವಾದಿರಾಜರೂ ತಮ್ಮ ದಕ್ಷಿಣಪ್ರಬಂಧಲ್ಲಿ ಈ ಕ್ಷೇತ್ರದ ಉಲ್ಲೇಖ ಮಾಡಿದ್ದಾರೆ.ಆದಿಕೇಶವ ಕ್ಷೇತ್ರ ಎಂಬ  ಹೆಸರು ಇದೆ. )

 ರಾಗ ಕಲ್ಯಾಣವಸಂತ 

 ಧ್ರುವತಾಳ 

ಕೇಶವ ಕೃಷ್ಣ ತ್ರಿಲೋಕೇಶ ಕೈಟಭಾರಿ 
ಸಾಸಿರಫಣಾವುಳ್ಳ ಶೇಷ ಶಯನಾ 
ಕ್ಲೇಶನಾಶನಾ ನರಕೇಸರಿ ವೇಷಾನೆ 
ಮೀಸಲಾಭರಣಾ ವಿಭೂಷಣ ಸರ್ವದ
ಶ್ರೀ ಸತಿ ಉರದಲ್ಲಿ ವಾಸವಾಗಿ ನಿತ್ಯ 
ತಾ ಸೇವಿಸುವಳು ಸಂತೋಷಾಬ್ಧಿಯೊಳು ಮುಳುಗಿ 
ಪೂಸಿದಾ ಶ್ರೀಗಂಧ ವಾಸನಿಯಾ ಕಮ 
ಲಾಸನ ಜಪಿಸಿ ಎಣಿಸುವವನನುದಿನ 
ಈ ಸುಖವಿನ್ನಾವ ದೇಶ ದೈವಂಗಳಲ್ಲಿ 
ಏಸೇಸು ಪರಿಯು ನಿಕ್ಷಿಸಲು ಕಾಣೆನೋ 
ಈಶಾದ್ಯಾರೊಡಿಯಾದಿ ಕೇಶಿಖಳಮರ್ದನಾ 
ಶ್ರೀಶಾ ವಿಜಯವಿಠಲಾ ಸುಲಭಾ ಆದಿ 
ಕೇಶವಾ ತಾಮ್ರಪರ್ಣಿವಾಸ ಲೋಕೇಶಾ  ॥೧॥

 ಮಟ್ಟತಾಳ 

ಚತುರಾನನ  ಭಜಿಸಿ ಅತಿದುರುಳಾ ಕೇಸಿ 
ಸತತ ತಪಸಿಯಾಗಿ ಮಿತಿ ಇಲ್ಲದ ದಿವಸ 
ಅತಿಶಯದಲಿ ವರವ ಇತರಾದಿಗಳಿಂದ 
ಹತವಾಗದಂತೆ ನುತಿಸಿ ಬೇಡಿಕೊಂಡ 
ಕ್ಷಿತಿಯೊಳಗೆ ದಿನ ಪ್ರತಿದಿನದಲಿ ಸುರರ 
ಖತಿಗೊಳಿಸಿದನುನ್ನತ ಬಲು ಗರ್ವದಲಿ 
ಪತಿತಪಾವನನಾದ ವಿಜಯವಿಠಲನ್ನ ಭ
ಕುತ ಜನರಿಗೆ ಅಹಿತನಾಗಿ ಮೆರವುತಿರೆ   ॥೨॥

 ರೂಪಕತಾಳ 

ಆದಿಕೇಶಾನೆಂಬ ದೈತ್ಯಾನ ಉಪಹತಿಗೆ 
ಆದಿದೈತ್ಯರು ಬಳಲಿ ಬಲು ಬಗೆಯಿಂದಲಿ 
ಆ ದೈತ್ಯನುಪಟಳ ತಾಳಾಲಾರೆವು ಎಂದು 
ವೇದಗಳಿಂದಲೀ ವೇಧಾಗೆ ಮೊರೆ ಇಡಲು 
ಆದರಿಸಿ ತನ್ನಿಂದಾದೆ ಮೊದಲಿಗೇ 
ಕ್ರೋಧರಿಗೆ ಇತ್ದದಪರಾಧಾವೆನ್ನದು ಎಂದು 
ಕಾದುವದರಿದವರಿದೂ ಮಿಕ್ಕಾದವರಿಗೆನುತಾ 
ಶ್ರೀದೇವಿ ಅರಸನ್ನಾ ಪಾದದಲ್ಲಿಗೆ ಸಾರಿ 
ಖೇದಿಗನು ಮಹೇಂದ್ರಾ ಪ್ರದೇಶಾದಲ್ಲಿದ್ದು 
ಬಾಧಿಯಾ ಬಡಿಸುವದು ವಿಧಿ ತಾ ಬಿನ್ನೈಸೆ 
ಮೇಧಿನಿಪತಿ ವಿಜಯವಿಠಲಾದಿ ಕೇಶವಾ 
ತಾದಯಾದಿಂದಲಜಾದಿಯಾ ಕಳುಹೀ   ॥೩॥

 ಝಂಪೆತಾಳ 

ಅಸುರನಿದ್ದೆಡೆಯಲ್ಲಿ ಒಮ್ಮಿಂದೊಮ್ಮೆಲೇ ರ 
ಕ್ಕಸರ ರಿಪು ಎದುರಾಗಿ ಬಂದು ನಿಂದು
ಬಿಸಜಸಂಭವನ ರೋಮಾದಿಂದ ಜನಿಸಿದ 
ಅಸಮ ನೀ ನಹುದೆನುತ ಅವನ ಪಿಡಿದೂ 
ಕುಶಿಯನುಗೊತ್ತಿ ಏಳದಂತೆ ಮಲಗಿಸಿ 
ಅಸುರಾರಿ ಖಳನ ಮೈಮೇಲೆ ಪವಡಿಸಿದ 
ನಿಶಾಚರಾ ಸಾಯದಂತುಪಾಯವನು ಕ 
ಲ್ಪಿಸಿದ ಹರಿಮಹಿಮೆಗೆ ಏನೆಂಬೆನೋ 
ಕುಸುಮಶರನಯ್ಯನೆ ವಿಜಯವಿಠಲನ ತು 
ತಿಸುತ್ತಿರಲಿತ್ತ ಅಸುರನ ಮಡದಿ ಮುನಿದೂ  ॥೪॥

 ತ್ರಿವಿಡಿತಾಳ 

ತನ್ನ ಗಂಡನ ಮೇಲೆ ಪನ್ನಗಶಯನನನ್ನು 
ಸಣ್ಣವನ ತೆರದಿನ್ನೂ ಮಲಗಿರೆ 
ಮುನ್ನೆ ಕೋಪವ ತಾಳಿ ಭಿನ್ನಾಮಾಳಿಪೆನಿವ
ರನ್ನು ಬಿಡಿಸಿ ಎಂದು ಪುಣ್ಯ ಗಂಗಿಯಾ ಬಾರಾ
ವನ್ನು ಹಾರೈಸಾಲು ತನ್ನಿಂದಾದಾ ಸೇವೆ 
ಯನ್ನು ಮುಟ್ಟಿಪೆನೆಂದು ಘನ್ನಾತೀವರ ತಾಮ್ರ 
ಪರ್ನಿಯಾ ಒಡಗೊಂಡು ಬಿನ್ನಾಣಾದಲಿ ಭೋ 
ರನ್ನೆ ಪರಿದು ಬಂದಳಾನಂತನ ನೋಡಿ 
ಸನ್ಮನಾದಿಂದಲಾ ತನ್ನ ಸುತ್ತಲು ಗಂಗೆ 
ರನ್ನದ ವನಮಾಲೆಯನ್ನು ಆದಳು ಸುರರೂ 
ಬಣ್ಣಿಸಿ ಪೊಗಳಾಲು ಕಣ್ಣೆವೆ ಇಡದಲೆ 
ಅನಂತ ಶಯನ್ನಾ ವಿಜಯವಿಠಲದೇವಾ 
ಗ್ರಣ್ಯನ ಲೀಲೆಗೆ ಅನಂತಾ ನಮೊ ನಮೊ  ॥೫॥

 ಅಟ್ಟತಾಳ 

ಅಂದು ಪ್ರಭಾಕರಾ ಬಂಧುವಿನ ನಿಜಾ 
ನಂದನ ಗರುಡ ಪುರಂದರ ಉಳಿದಾದ 
ವೃಂದಾರರ ಬಲ ಒಂದಾಗಿ ಎದಿರಿಲಿ 
ಬಂದು ಜಯ ಜಯವೆಂದು ಪೇಳುತಲಿರೆ 
ನಿಂದವರನ ದಯದಿಂದಲಿ ನೋಡಿ ಮು 
ಕುಂದನು ವರಗಳ ಕುಂದಾದೆ ಬೇಡೆನೆ 
ಸಂದೇಹ ತೊರದು ಕಾಯೆಂದು ಶಿರವಾಗಿ 
ಇಂದೀಖಳನ ಮ್ಯಾಲೆ ಬಂದು ನೀನು ನಾ 
ಗೇಂದ್ರ ಸಹಿತಾಲಿದ್ದಂದಾದಿ ಪವಡಿಸಿ 
ಒಂದು ಕಲ್ಪವಿರು ಎಂದು ಪ್ರಾರ್ಥನೆ ಮಾಡಿ 
ನ್ನೊಂದು ವರವಕೊಡು ಮಂದಮತಿಗಳಿಗೆ 
ಸಂದರುಶನದಿಂದ ಪೊಂದಲಿ ಕೈವಲ್ಯಾ 
ಇಂದು ವಂದಿತ ಪಾದಾ ವಿಜಯವಿಠಲ ನೀನೆ 
ಒಂದೆ ದೈವ ಜಗತ್ತಂದೆ ಕೃಪಾಸಿಂಧೂ  ॥೬॥

 ಆದಿತಾಳ 

ತುತಿಸಾಲು ತೃಪ್ತನಾಗಿ ಚತುರ ಮೊಗಾದಿಗಳ 
ಅತಿವೇಗದಿಂದ ನೋಡುತಲಿ ನೀವಂದತೆರದೀ 
ಹಿತವಾಗುವದದಕ್ಕೆ ಪ್ರತಿಕೂಲಾವಿಲ್ಲಾವೆಂದು 
ಪಿತಾಮಹನಯ್ಯಾ ನಗುತ ಭರವಸವಿತ್ತಾ 
ಕ್ಷಿತಿಯೊಳಗಾವಾನಾರ ಮತಿವಂತನಾಗಿ ಬಂದು 
ಸಿತ ಮನದಲಿ ಯಾತ್ರಿ ಮಿತಿ ತಪ್ಪದಂತೆ ಮಾಡಿ 
ಸಿತ ನದಿ ತಾಮ್ರಪರ್ನಿ ಜತೆಯಲ್ಲಿ ಸ್ನಾನಗೈದು 
ಚತುರನಾದವಗೆ ಶಾಶ್ವತವೆನ್ನಿ ಮೇಲುಲೋಕ 
ಪುಥಮಾಂಗನೊಡಿಯಾ ವಿಜಯವಿಠಲನಂತಾ 
ರ್ಪಿತವೆಂದು ಮಾಡಿ ಕುಲಸಹಿತಗತಿಗೆ ಪೊಂದುವದು ॥೭॥

 ಜತೆ 

ಆದಿಕೇಶವಕ್ಷೇತ್ರದಲ್ಲಿ ಒಂದು ರಾತ್ರಿ 
ಸಾಧು ಇರಲು ಒಲಿವ ವಿಜಯವಿಠಲನಂತಾ  ॥೮॥
**********