..
kruti by ವೀರನಾರಾಯಣ Veeranarayana
ನಾಲಗೆ ಬರದಯ್ಯಾ ಶ್ರೀ ಗುರುವರರಾಯಾಪಾಲಿಸೆನ್ನೊಳು ನಿನ್ನ ಪೂರ್ಣದಯ ಪ
ನಾಲಿಗೆ ಮತಿಗಳು ತಡೆದು ನಿಂತಿಹವಯ್ಯಮೇಲು ನಿಮ್ಮಯ್ಯ ನಾಮಾ ನಾ ಪೇಳೆನೆಂದರೆ ಅ.ಪ.
ಕಥೆಯ ಕಟ್ಟಿದೆ ನಾಟಕ ಪದ್ಯವ ರಚಿಸಿದೆನೆಂಬಿ ಹೆಮ್ಮೆಯೊಳಿದ್ದೆ ಯತಿರಾಯಾನಿನ್ನ ಸುಚರಿತೆಯ ಕಥಿಸಲುಗತಿಕಾಣದೆ ನಿಂತು ಬಾಯ್ಬಿಡುವೆ ಪೊರೆಯಯ್ಯಾ 1
ಬಡವನು ಮತಿಯೊಳು ಸಿರಿಯೊಳು ಸಹ ಎನ್ನಪಡಿಪಾಟಲನು ಕಡಿದು ಕಾಪಾಡೊಕಡಿದೆನ್ನ ಚಿತ್ತದ ದುಗುಡವ ಕಳೆಯೆಂದುಪಿಡಿದು ನಿನ್ನಯ ಪಾದ ತುತಿಸುವೆನೆಂದರೆ 2
ಸ್ಮರಿಸುವೆ ಮನದೊಳು ನಿರುತದಿ ಯತಿವರ್ಯಾಶ್ರೀ ರಾಘವೇಂದ್ರರಾಯಾಧರೆಯೊಳು ಪರಮ ದಾನಿಗಳ ಹಿರಿಯನೆಂದುಅರಿತು ನಾ ಬಂದೆನೊ ಮೂಕನಾಗಿರುವೆನೊ 3
ಮನದೊಳಗಿರುತಿರ್ದ ಭಕುತಿ ಭಾವಗಳುಏನಿತೆಂಬುದನು ನೀನೇ ನೋಡಿಮನಸಿನಭೀಷ್ಟವನಿತ್ತು ಕಾಯುವದಯ್ಯಾಮನದೊಳು ನೆನೆಯುವೆ ಹೊರಗಾಡಲಾರದೆ 4
ಕರುಣಾಳು ಗದುಗಿನ ವೀರನಾರಾಯಣಹರನೆ ಕಳುಹಿಸಿದನೆಂದು ನಾನಿಲ್ಲಿ ಬಂದೇವರ ನಿನ್ನ ಚರಣವೂ ದೊರೆಯೆ ನಾ ತುತಿಸಲುಸರಿಯಾದ ನುಡುಗಳ ಕರುಣಿಸು 5
***