kruti by bhupati vittalaru ( kakhandaki Ramacharyaru)
ರಾಮಲಿಂಗ ಶಿವಶಂಕರ ಪಾರ್ವತಿರಮಣಾ ನಿನಗೆ ನಮೊ ನಮೊ ಪ
ರಾಮನಾಮ ಪ್ರಿಯ ರಾಮೇಶ್ವರ ತವಚರಣಕಮಲಕೆ ನಮೊ ನಮೊ ಅ.ಪ
ಗಜಚರ್ಮಾಂಬರ ಭುಜಗಭೂಷಣತ್ರಿಜಗ ವಂದ್ಯತೇ ನಮೊ ನಮೊಭಜಕಾಮರ ಕುಜ ಕುಜನಭಂಜನಾ'ಜಯಸಾರಥಿಸಖ ನಮೊ ನಮೊ 1
ನೀಲಕಂಠ ತ್ರಿಶೂಲ ಡಮರು ಧರಫಾಲನಯನತೇ ನಮೋ ನಮೋಪ್ರಳಯಕರ್ತ ಕೈಲಾಸವಾಸ ಶ್ರೀಶೈಲಾಧಿಪತೆ ನಮೋ ನಮೋ 2
ಕಾಶಿವಿಶ್ವೇಶ್ವರ ಕೇದಾರೇಶ್ವರಮಹಾಬಲೇಶ್ವರ ನಮೋ ನಮೋದ್ವಾದಶ ಜೋತಿರ್ಲಿಂಗಾಂತರ್ಗತಉಮಾಮಹೇಶ್ವರ ನಮೋ ನಮೋ 3
ಕೃಷ್ಣವೇಣಿ ತಟ ಚಿಕ್ಕಗಲಗಲಿವಾಸರಾಮೇಶ್ವರ ನಮೋ ನಮೋಮೃತ್ಯುಂಜಯ ಭೂಪತಿ'ಠಲಪ್ರಿಯಚಂದ್ರಮೌಳಿ ತೇ ನಮೋ ನಮೋ 4
ಪಾರ್ವತಿ ದೇವಿ
***