ಇಂತು ಮರುಳಾದೆನು ಬಲು ಭ್ರಾಂತಿಗೊಳಗಾದೆನು
ಲಕ್ಷ್ಮೀಕಾಂತಾ ಸರ್ವಾಂತರ್ಯಾಮಿ ಪ.
ಕಾಮಪಾಶಕೆ ಶಿಲ್ಕಿದೆನು
ಬಾಯಾರಿ ಬಳಲಿದೆನು
ಹೀನ ಮತವೆನ್ನದೆ
ಆಶಕೆ ಗುರಿಯಾದೆ 1
ನಾನು ನನ್ನದು ಎಂದೆ
ಧರ್ಮಾಂಧಳಾದೆ ಮೆರೆದೆ
ಗುರುಹಿರಿಯರಿಗೆ ಎರಗದೆ
ಹರಿನಿನ್ನ ಮರೆದೆ 2
ಹಿಂದೇ ಸುಜನ್ಮಗಳು ಬಂದು ಪೋದವು
ಮುಂದಿನ ಗತಿಯು ಎನಗೆ ತಿಳಿಯದು
ಬಂಧನದೊಳು ಸಿಗಿಬಿದ್ದೆನು
ಬಂದೆನ್ನ ಕಾಯೊ ಕಾಳಿಮರ್ಧನಕೃಷ್ಣಾ 3
****