ಈತನೆ ಶ್ರೀ ಪ್ರಲ್ಹಾದನು ಆಹ್ಲಾದಕರನು ಪ
ಈತನೆ ಪ್ರಲ್ಹಾದ ಜಗನ್ಮಾತಾಲಕುಮಿಪತಿಯ ಗುಣವಭೂತಳದಲ್ಲಿ ತೋರಿ ಬಹು ನಿರ್ಭಿತಿಯಿಂದ ಮೆರೆದ ಗುರು ಅ.ಪ.
ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆಕಷ್ಟ ಬಡಿಸೆ ಸುತಗೆ ಜವದಲಿಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಅಸುರನಂದನಶ್ರೇಷ್ಠ ನಖದಿಂ ಬಗೆಯ ನಿಷ್ಠೆಯಿಂದ ನಮಿಸಿದ ಗುರು 1
ಶೂರ ಬಾಲ್ಹೀಕನೆನಿಸಿದ ಬ್ರಹ್ಮಣಮುನಿ ಪಾದಾರವಿಂದ ದಯದಿ ಭಜಿಸಿದಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾಸಾರಪಾನ ಮಾಡಿ ವಿಭುದಚಾರು ಚಂದ್ರಿಕಾ ರಚಿಸಿದ ಗುರು 2
ಸಿಂಧುಶಯನ ಶ್ರೀ ರಮಾಪತಿ ವಿಠ್ಠಲನ ಭಕುತಿಯಿಂದ ಭಜಿಪ ರಾಘವೇಂದ್ರಯತಿಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು 3
****
ಈತನೇ ಶ್ರೀ ಪ್ರಲ್ಹಾದನು ಆಹ್ಲಾದಕರನು || ಪ ||
ಈತನೇ ಪ್ರಹ್ಲಾದ ಜಗನ್ಮಾತಾಲಕುಮಿಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು || ಅ ||
ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆ
ಕಷ್ಟಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ಥಂಭದಿಂದ ದೃಷ್ಟನಾಗಿ ಅಸುರನಂದನ
ಶ್ರೇಷ್ಠ ನಖದಿಂ ಬಗೆಯೆ ಹರಿಯ ನಿಷ್ಠೆಯಿಂದ ನಮಿಸಿದ ಗುರು || ೧ ||
ಶೂರ ಬಾಲ್ಹೀಕನೆನಿಸಿದ ಬ್ರಹ್ಮಣ್ಯಮುನಿ ಪಾ
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ
ಸಾರಪಾನ ಮಾಡಿ ವಿಬುಧ ಚಾರುಚಂದ್ರಿಕಾ ರಚಿಸಿದ ಗುರು || ೨ ||
ಸಿಂಧುಶಯನ ಶ್ರೀರಮಾಪತಿವಿಠ್ಠಲನ ಭಕುತಿ
ಯಿಂದ ಭಜಿಪ ರಾಘವೇಂದ್ರ ಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದವ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು || ೩ ||
********
ಈತನೇ ಪ್ರಹ್ಲಾದ ಜಗನ್ಮಾತಾಲಕುಮಿಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು || ಅ ||
ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆ
ಕಷ್ಟಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ಥಂಭದಿಂದ ದೃಷ್ಟನಾಗಿ ಅಸುರನಂದನ
ಶ್ರೇಷ್ಠ ನಖದಿಂ ಬಗೆಯೆ ಹರಿಯ ನಿಷ್ಠೆಯಿಂದ ನಮಿಸಿದ ಗುರು || ೧ ||
ಶೂರ ಬಾಲ್ಹೀಕನೆನಿಸಿದ ಬ್ರಹ್ಮಣ್ಯಮುನಿ ಪಾ
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ
ಸಾರಪಾನ ಮಾಡಿ ವಿಬುಧ ಚಾರುಚಂದ್ರಿಕಾ ರಚಿಸಿದ ಗುರು || ೨ ||
ಸಿಂಧುಶಯನ ಶ್ರೀರಮಾಪತಿವಿಠ್ಠಲನ ಭಕುತಿ
ಯಿಂದ ಭಜಿಪ ರಾಘವೇಂದ್ರ ಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದವ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು || ೩ ||
********