Showing posts with label ಜೋ ಜೋ ಕಂದರ್ಪ ಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ hayavadana. Show all posts
Showing posts with label ಜೋ ಜೋ ಕಂದರ್ಪ ಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ hayavadana. Show all posts

Wednesday, 1 September 2021

ಜೋ ಜೋ ಕಂದರ್ಪಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ ankita hayavadana

 ..

ಜೋಜೋ ಕಂದರ್ಪಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ ಪ .


ಜೋಜೋ ನಂದನ ಸುಕೃತದ ಫಲವೆಜೋಜೋ ಮುನಿಮನಮಧುಪ ಕಮಲವೆಅ.ಪ.

ಪೊನ್ನ ತೊಟ್ಟಿಲ ಮೇಲೆ ಮಣಿಮಯವಾದ ವಿತಾನ್ನವ ಕಟ್ಟ್ಟಿ ಪಟ್ಟೆಯ ಮೇಲ್ವಾಸಿನಲಿಚಿನ್ನ ಶ್ರೀಕೃಷ್ಣನ ಮಲಗಿಸಿ ಗೋಕುಲದಕನ್ನೆಯರೆಲ್ಲ ತೂಗುತ ಪಾಡಿದರೆ 1

ಶಶಿಯ ಚೆಲುವ ಪೋಲ್ವ ಮೊಗದ ಚೆನ್ನಿಗನೆಎಸೆವ ಕಿರುಡೊಳ್ಳಿನ ಸೊಬಗ ಬಾಲಕನೆಪೊಸಕೆಂದಾವರೆಯಂದದಿ ಮೃದುಪದನೆಬಿಸರುಹನಯನ ಬಿಡದಿರೆಮ್ಮ ಕಂದ 2

ಪೂತನಿ ಅಸುವನೀಂಟಿದ ಪೋತ ಶಿಶುವೆವಾತದೈತ್ಯನ ಗೆಲಿದದುಭುತ ಬಾಲಭೂತಗಳನಂಜಿಸುವರ್ಭಕನೆಓತೆಮ್ಮ ಶಿಶುಗಳ ಸಲಹೊ ಶ್ರೀಹರಿಯೆ 3

ಅಮೃತವನೂಡಿ ಸುರರ ಬೆಳೆಸಿದನೆಭ್ರಮಿತನಾದ ಕರಿವರನ ಕಾಯ್ದವನೆಸುಮುಖತನದಿ ಪರೀಕ್ಷಿತನ ಪೊರೆದನೆಮಮತೆಯಿಂದೆಮ್ಮ ಶಿಶುಗಳ ನೀ ಸಲಹೊ 4

ಪೊಳೆÀವ ಮೂಲರೂಪದಿ ತೋರಿದೆ ನೀ-ನುಳಿದ ಶಿಶುಗಳಂತೆ ಶಿಶುವೆನ್ನಬಹುದೆಲಲನೆ ಬೇಡಿಕೊಳ್ಳೆ ತನ್ನ ತಾನೆ ಶಿಶು-ಗಳ ಭಾವವಿಡಿದೆಯೆಂದೆಂಬರು ನಿನ್ನ5

ಈ ಮಹಿಯೊಳು ಹರಿ ಶಿಶುವಾಗೆ ತನ್ನ ಮ-ಹಿಮೆಯ ತುತಿಸುವ ಶ್ರುತಿವನಿತೆಯರುವ್ಯಾಮೋಹದಿ ಬಂದು ಲಲನೆಯರಾದರುಆ ಮುಗ್ಧೆಯರು ಪಾಡುತ ತೂಗಿದರೆ 6

ನೀ. ಶಿಶುವಾದರೆ ನಿನ್ನುದರದೊಳಿರ್ದ ಶ್ರುತಿಮುಕ್ತರು ಶಿಶುಗಳೆಂತಾಹರೊವೇಷಧರನಾಗಿ ಶಿಶುಗಳ ವಾಸಿನೊಲಿದೆವಾಸುದೇವ ನಮ್ಮ ಬಿಡದಿರು ಶ್ರೀ ಕೃಷ್ಣ 7

ಆವಳಿಸಲು ನಿನ್ನ ಗರ್ಭದೊಳಗೆ ಭುವ-ನಾವಳಿ ಗೋಪಗೋಪಿಯರನ್ನು ತೋರಿದೆಶ್ರೀವರ ನೀನೆಲ್ಲರ ತಂದೆಯಲ್ಲದೆಭಾವಜ್ಞರ ಮತದಿ ಶಿಶುವೆಂತಪ್ಪೆ 8

ಹಯವದನನಾಗಿ ವೇದವÀ ತಂದುಪ್ರಿಯಸುತ ಚತುರಮುಖಗೆ ಪೇಳಿದಖಿಳ ವಿ-ದ್ಯೆಯ ಖನಿ ನೀನೀಗಳೇನೆಂದು ನುಡಿಯಲ-ರಿಯದ ಬಾಲಕನಾದ ಬಗೆ ಪೊಸತಯ್ಯ

***