Showing posts with label ಶಿವಭಕ್ತನಾಗೋ ಪ್ರಾಣೀ ಅವನಿಯಲ್ಲಿ pranesha vittala. Show all posts
Showing posts with label ಶಿವಭಕ್ತನಾಗೋ ಪ್ರಾಣೀ ಅವನಿಯಲ್ಲಿ pranesha vittala. Show all posts

Sunday, 17 November 2019

ಶಿವಭಕ್ತನಾಗೋ ಪ್ರಾಣೀ ಅವನಿಯಲ್ಲಿ ankita pranesha vittala

by ಪ್ರಾಣೇಶದಾಸರು
ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ಪ

ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃಸಂಗನಾಗೊ ದುರ್ವಿಷಯದೀ 1

ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ ||ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ2

ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ ||ಅಜಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ 3
*******