Showing posts with label ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು ಇಂದೆನ್ನ ಜನುಮ vijaya vittala. Show all posts
Showing posts with label ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು ಇಂದೆನ್ನ ಜನುಮ vijaya vittala. Show all posts

Thursday, 17 October 2019

ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು ಇಂದೆನ್ನ ಜನುಮ ankita vijaya vittala

ವಿಜಯದಾಸ
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು |
ಇಂದೆನ್ನ ಜನುಮ ಸಫಲ |
ಹಿಂದೆ ಅನಂತೇಶನೆಂದೆಂಬ ನಾಮದಲಿ |
ಕಂಬು | ಕಂದರದ | ತಿಮ್ಮನ ಪ

ಮಕರ ಕುಂಡಲಧಾರ |
ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ |
ಕಮಲ ಅಕುಟಿಲ ಹೃದಯಮಂದಿರ |
ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ |
ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ1

ಕರ ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ |
ಮುಂಗೈಯ ಫಣಿಯ ತಿಲಕಾ |
ಬಂಗಾರದಂಬರ ಭವದೂರಾ ಪದದಲ್ಲಿ |
ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ 2

ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ |
ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ |
ಕೊಂಡಾಡಿದವರಿಗೆ ತಂಡ | ತಂಡದ ವರವೀವಾ |
ಉದ್ದಂಡ ವಿಜಯವಿಠ್ಠಲ|
ಅಂಡಜಗಮನ ಕೃಷ್ಣಾ ತಿಮ್ಮಾ3
********