Showing posts with label ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯ prasannavenkata. Show all posts
Showing posts with label ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯ prasannavenkata. Show all posts

Tuesday, 19 November 2019

ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯ ankita prasannavenkata

by ಪ್ರಸನ್ನವೆಂಕಟದಾಸರು
ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯಸಾಯಸಬಟ್ಟೆನು ಭವದಿ ಶ್ರೀಯರಸನ್ನ ನಂಬದೆ ಪ.

ಪಶ್ಚಿಮ ಜಾಗರದಿ ಕಾಕುತ್ಸ್ಸ್ಥನ ಪ್ರೀತಿಗೋಸುಗದುಶ್ಚಿತ್ತ ವೃತ್ತಿಯನೀಗಿನಿಶ್ಚಿತನಾಗಿಸಚ್ಚಿದಾನಂದಕಾಯನ ಆಶ್ಚರ್ಯಕರ ನಾಮವಉಚ್ಚರಿಸದೆ ನಿದ್ರೇಲಿ ಮೆಚ್ಚಿ ಘುರುಘುರಿಸುತ 1

ತುಲಸಿ ಮಂಜರಿ ಪುಷ್ಪ ಅಲಸದೆ ತಂದು ಶ್ರೀನಳಿನನೇತ್ರನ್ನ ನಾಮಾವಳಿಗಳಿಂದಸಲೆ ಅವನಂಘ್ರಿಕಮಲಕರ್ಪಿಸದೆ ಸದಾಲಲನೆಸಂಪದಾಬ್ಧಿಲಿ ಮುಳುಗಿ ದುರಾಶೆಯಲ್ಲಿ2

ಸತತ ಶಕ್ತ್ಯಾನುಸಾರ ವ್ರತಧರ್ಮಾಚರಿಸದೆಅತಿಥÀರೊಳೀತನ ನಂಟನೆಂದರೆಅತಿಸ್ನೇಹ ಬಳಸುತ ಹಿತಬಿಟ್ಟೆ ವೃಥಾ ಕೆಟ್ಟೆಗತಿಕಾಣಿಸಿನ್ನಾರೆ ಶ್ರೀಪತಿ ಪ್ರಸನ್ವೆಂಕಟಯ್ಯ3
******