Showing posts with label ಜಲದ ನೀಲಗಾತ್ರ ಏತರ ಚೆಲುವ ರುಕ್ಮಿಣಿ purandara vittala. Show all posts
Showing posts with label ಜಲದ ನೀಲಗಾತ್ರ ಏತರ ಚೆಲುವ ರುಕ್ಮಿಣಿ purandara vittala. Show all posts

Thursday, 5 December 2019

ಜಲದ ನೀಲಗಾತ್ರ ಏತರ ಚೆಲುವ ರುಕ್ಮಿಣಿ purandara vittala

ಪುರಂದರದಾಸರು
ಜಲದ ನೀಲಗಾತ್ರ ಏತರ ಚೆಲುವ ರುಕ್ಮಿಣಿ |ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.

ಉದಕದೊಳಗೆ ವಾಸವೇಕೆ ಸದನವಿಲ್ಲವೆ |ಸುದತಿಸುಡುವ ಕಾಡಿಗಿಂತ ಲೇಸು ಅಲ್ಲವೆ1

ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ 2

ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ 3ಕರುಳ ಕೊರಳ ಸರವು ಏಕೆ ಸರವು ದೊರಕದೆ |ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ 4

ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ 5

ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ 6

ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |ಭೂತಗಣಗಳಾಳುವುದಕೆ ಭೀತಿ ಇಲ್ಲವೆ 7

ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ 8

ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |............... ಶಾಪ ಹತ್ತಲಿಲ್ಲವೆ 9

ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ 10
********