ನಾರಾಯಣ ವಾಸುದೇವ ಸಖ ಯೋಗಾನಂದ
ಶ್ರೀ ರಮಾಪಪಾಲಯಮಾಂ
ವಾರಿಜಾಸನಪ್ರಮುಖಾಮರಗಣ ವಂದ್ಯ
ಶೌರಿ ಕೋಸಲಪುರೀಶ ನರ ಸಂಕರ್ಷ ಅ.ಪ
[ಶ್ರೀಧರ]ಶೇಷಶಯನ ವಿಠಲ ರಮಾಸಖ
ಯಾದವೇಂದ್ರ ಪಾಂಡವದೂತ
ಮಧುರಾನಗರ ಗೋವಿಂದ ವೀರರಾಘವ
ಗದಾಧರ ಪೂರ್ಣಹರೇ 1
ಪರಮೇಶಪುರಾಶ್ರಯ ಪುರುಷೋತ್ತಮ
ಸುರಪ್ರಿಯ ಪದ್ಮಲೋಚನಸಂಗ
ಪರಮ ಸ್ವಾಮಿನ್‍ನಾಥ ಹಿರಣ್ಯಾ
ಸುರಮರ್ದನ ಭಾರ್ಗವಮಹಾವಿಷ್ಣೋ 2
ಮಧುಸೂದನ ಪದ್ಮಲೋಚನ ಹರ
ಮಾಧವ ತ್ರಿವಿಕ್ರಮ ಸಂಕರುಷಣ
ಮಧುರದ್ವಿಜರವನಿಪತೇ ಪರಬ್ರಹ್ಮಂ
[ಮದರಿಪು] ಪಾಪಹರಮಹಾವಿಷ್ಣೋ 3
ಭಕ್ತಿಪ್ರದಾಯಕ ಗೋಪವೇಷ
ಭಕ್ತವತ್ಸಲ ಪ್ರದ್ಯುಮ್ನಾಚ್ಯುತ
ಭಕ್ತಸಖ ಮಹಾಸಿಂಹಮಣಿ ವ್ರತ
ಭಕ್ತ ಪ್ರಿಯ ಕೃಷ್ಣ ಭೋಗಿಶಯನ ಶೌರೆ 4
ಕಾಳಮಘಮಲ್ಲಾರ ನಿಬಿಡಾಕಾರ[ಲೋಲ]
ಸುವರ್ಣ[ಸೀತಾ]ಶರಣ್ಯ ರಘುದ್ವಹ
ಸಾಲಗ್ರಾಮ ಗರ್ಭಜ್ಞ ಸುದರುಶನ
ಪಾತೋನಂದಸೂನೊ [ಸಲಾಪುರಾಧಿ]5
****