Showing posts with label ಆದಿಗುರುರಾಯ ನಮ್ಮ ಮುಖ್ಯಪ್ರಾಣ prasannavenkata. Show all posts
Showing posts with label ಆದಿಗುರುರಾಯ ನಮ್ಮ ಮುಖ್ಯಪ್ರಾಣ prasannavenkata. Show all posts

Thursday, 7 November 2019

ಆದಿಗುರುರಾಯ ನಮ್ಮ ಮುಖ್ಯಪ್ರಾಣ ankita prasannavenkata

by ಪ್ರಸನ್ನವೆಂಕಟದಾಸರು
ಆದಿಗುರುರಾಯ ನಮ್ಮ ಮುಖ್ಯಪ್ರಾಣ
ಭವವ್ಯಾಧಿ ಕೋಟಿ ಭೇಷಜನೆಮುಖ್ಯಪ್ರಾಣಪ.

ಜೀವ ತೊರೆದ ಪ್ಲವಗಗಣಕೆಮುಖ್ಯಪ್ರಾಣ
ಸಂಜೀವನ ತಂದೌಷಧವನಿತ್ತಮುಖ್ಯಪ್ರಾಣ
ಹೇವಿನ ರಕ್ಕಸರಮಾರಿಮುಖ್ಯಪ್ರಾಣ
ಹನುಮದೇವ ದೇವ ರಾಘವಪ್ರಿಯಮುಖ್ಯಪ್ರಾಣ1

ಸೋಜಿಗದಿ ಕೀಚಕನ ಕೊಂದಮುಖ್ಯಪ್ರಾಣ
ಭೀಮಆಜನುಮ ಅಸಹಾಯಶೂರಮುಖ್ಯಪ್ರಾಣ
ರಾಜಸೂಯಕೆ ಮುಖ್ಯಕರ್ತಾಮುಖ್ಯಪ್ರಾಣ
ಕ್ಷಾತ್ರತೇಜಪೂರ್ಣ ಕೃಷ್ಣಾಂಕಿತನೆಮುಖ್ಯಪ್ರಾಣ2

ರೌಪ್ಯಪೀಠದಿ ಕೃಷ್ಣಾರ್ಚಕನೆಮುಖ್ಯಪ್ರಾಣ
ಮಧ್ವ ಸಾರೂಪ್ಯ ಮುಖ್ಯದ ಮುಕ್ತಿದಾತಮುಖ್ಯಪ್ರಾಣ
ಗೌಪ್ಯ ಶ್ರುತ್ಯಜ್ಞಾಚಾರ್ಯನೆಮುಖ್ಯಪ್ರಾಣ
ದೇದೀಪ್ಯ ಪ್ರಸನ್ವೆಂಕಟಪತಿಪ್ರಿಯಮುಖ್ಯಪ್ರಾಣ3
*******