..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ವಾಯುದೇವರು
ಆನಂದತೀರ್ಥರ ಮತ ಪರಮ
ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ
ಶಕುತಿಯು ಇದ್ದಷ್ಟು ತಿಳಿದು ಮತವು ಬಲು
ಯುಕುತಿಯಿಂದಲಿ ನೀ ಒಲಿಸು ಕಂಡ್ಯ
ಭಕುತಿಯು ಗುರುಗಳ ಪದದಲಿ ಮಾಡಲು
ಮುಕುತಿಯು ಕರವಶವಾಗುವದೊ ಸಿದ್ಧ 1
ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ
ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ
ಖಳಜನ ಸಹವಾಸ ಕುಮತಗಳಭ್ಯಾಸ
ಒಳಿತಲ್ಲವೊ ನಿನಗೆಂದಿಗನ್ನ 2
ಪ್ರವಚನ ಮಾಡುವ ಬುಧಜನ ಪೇಳುವ
ಸುವಚನ ಕೇಳಿ ನೀ ಬದುಕು ಕಂಡ್ಯಾ
ಕವಚವು ನಿನಗಿದು ಭವ ಛಳಿ ಬಾಧಿಗೆ
ಪ್ರವಚನ ಬಾಹೋದೆಂದಿಗನ್ನ3
ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು
ಮೆದ್ದರೆ ಕೋಟಿ ಭೋಜನದ ಪುಣ್ಯ
ಗೆದ್ದರು ಇವರನ್ನ ನಂಬಿದ ಜನರು
ಬಿದ್ದರು ದೂಷಕ ಜನ ತಮದಿ 4
ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ
ತಾಸು ಘಳಿಗೆ ನೆಚ್ಚಲು ಬೇಡ
ಏಸೇಸು ಸುಕೃತದಿ ದೊರಕಿತು ಈ ಮತ
ವಾಸುದೇವವಿಠಲನ್ನ ಪಾಡೊ 5
***