Showing posts with label ಲೇಸ ಪಾಲಿಸು ಜಗದೀಶನೆ ದಯದಿ govinda. Show all posts
Showing posts with label ಲೇಸ ಪಾಲಿಸು ಜಗದೀಶನೆ ದಯದಿ govinda. Show all posts

Saturday, 16 November 2019

ಲೇಸ ಪಾಲಿಸು ಜಗದೀಶನೆ ದಯದಿ ankita govinda

by ಗೋವಿಂದದಾಸ
ಲೇಸ ಪಾಲಿಸು ಜಗದೀಶನೆ ದಯದಿ |ದೋಷರಹಿತ ಪರಮೇಶನೆ ಮುದದಿ ಪ

ದಾಸ ಜನರ ಮನದಾಸೆಯ ಸಲಿಸುವ |ಸಾಸಿರ ನಾಮ ಸರ್ವೇಶ ಶ್ರೀಶಂಕರ ಅ.ಪ

ಕಾಮ ವ್ಯಾಮೋಹ ಮದಾಂಧಕಾರವು ಬಂದುಪ್ರೇಮದಿ ನಿನ್ನನು ಭಜಿಸಲು ಬಿಡದೂ |ಕಾಮಹರನೆ ಕಾಯೋ ಕಾಮಿತಾರ್ಥವನಿತ್ತು |ಪ್ರೇಮ ಗಿರಿಜಾರಮಣ |ಸೋಮಶೇಖರ ನಿನ್ನ ಲೇಸ ಪಾಲಿಸು 1

ಫಾಲಲೋಚನಭವ|ಭಾರನಿವಾರಣ |ಶೂಲಪಾಣಿಯೆ ಮುನಿಜಾಲಸಂರಕ್ಷಣ |ಮಹಾಲಿಂಗೇಶನೆ | ಭಕ್ತಪಾಲಕನೆಂಬುವ |ಮೂಲ ಚರಿತ್ರವಕೇಳಿಬಂದೆನು ದೇವಾ 2

ಹಿಂದೆ ಮಾರ್ಕಾಂಡೇಯ ಮುನಿವರ ನಿನ್ನನು |ಚಂದದಿ ಪೂಜಿಸಿ ವಲಿಸಲಾ ಯಮನೂ |ಬಂದು ಪಾಶವ ಕೊರಳ ಸಂದಿನೋಳ್ ಸೇರಿಸ- |ಲಂದು ಮೈದೋರಿ ಗೋವಿಂದಸಖ ನೀ ಕಾಯ್ದೆ 3
********