Showing posts with label ಗೋಕುಲದೊಳಗೆಲ್ಲ ಕೊಳಲೂದಲು pranesha vittala. Show all posts
Showing posts with label ಗೋಕುಲದೊಳಗೆಲ್ಲ ಕೊಳಲೂದಲು pranesha vittala. Show all posts

Monday, 11 November 2019

ಗೋಕುಲದೊಳಗೆಲ್ಲ ಕೊಳಲೂದಲು ankita pranesha vittala

by ಪ್ರಾಣೇಶದಾಸರು
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪ

ಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1

ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2

ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3

ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4

ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5
*******