..
ರಂಗನ್ಯಾಕೆ ಬಾರ ತಂಗಿ
ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ.
ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ.
ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ 1
ಹಾರ ಸರ ಉರದಲ್ಲಿ ಸಿರಿದೇವಿ ಸಿರಿವತ್ಸಕೊರಳ ಪದಕ ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವÀ ಶ್ರೀಹರಿಯನು ಕರೆದುತಾರೆ ರಮಣಿ 2
ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ3
***
pallavi
ranganyAke bAra tangi mangaLa mahimana divyAngava kANade enna kangaLu kangeDutive
anupallavi
rangumANikad-ungurad-anguliya sanneyinda pongaLalUduvana tOre ramaNi
caraNam 1
tingaLu mUDitu pika sangItava toDagitu bhrnga tannanganeyara sangaDa nalidu banda
shrngAravanada mrudu tangALi bIsitu nODAnanga necca bANagaLento anta
rangava tAkidarenna ingitavaritu dEvOttunga kAyadire uLivangana nAkANe namma
pengaLige banda balubhanga tannadallave sArangAkShi bEgavana tOre ramaNi
caraNam 2
hAra sara uradalli siridEvi sirivatsa koraLa padaka kaustubha ratnakarNakuNDala
sarasija mukhadi kastUri tilakaveseye parimaLisuva pUmAle mereye poLeva pItAmbarada suttaloleva
kirugejje maNimayakAnti mincutiralu caraNanUpura ghalughalukene kuNiva shrI hariyanu karedutAre ramaNi
caraNam 3
mandajAsanana tandeyendenipa gOvindana kandarpa vrundAdigaLa kandisuva kundillada
saundarya sandOhadoLagondondanAru ballaru endendivananu pondippa indire ivana guNasAndra kiruberaLinandava
nODutta AnandasindhuvinoLmuNugidaLindu hayavadana mukundana tandenna munde indumukhi karedutAre ramaNi
***