Showing posts with label ಜಯವದೆ ಜಯವದೆ ಮನೆತನಕೆ purandara vittala. Show all posts
Showing posts with label ಜಯವದೆ ಜಯವದೆ ಮನೆತನಕೆ purandara vittala. Show all posts

Wednesday 4 December 2019

ಜಯವದೆ ಜಯವದೆ ಮನೆತನಕೆ purandara vittala

ಜೋಗಿಪದ
ಜಯವದೆ ಜಯವದೆ, ಈ ಮನೆತನಕೆ
ಬಹಳ ಜಯವದೆ ||ಪ||

ಹಕ್ಕಿ ನುಡಿಯಿತಣ್ಣ ನುಡಿಯಿತು ಹಕ್ಕಿ ನುಡಿಯಿತು
ಒಂದು ಶುಭವಚನ ಒಂದೆರಡಕ್ಷರ
ಎರಡು ಮೂವತ್ತೆರಡಾಗಿ ನುಡಿಯಿತು
ವಾಲ್ಮೀಕನ ಉದ್ಧರಿಸಿತು ಹಕ್ಕಿಶಕುನವು
ಮುಕ್ಕಣ್ಣಗೆ ಜಯವಾಯಿತು
ಪಾರ್ವತಿಗೆ ಮಾಂಗಲ್ಯವಾಯಿತು
ಈರೇಳು ಜಗದೊಳಗೆ ಮೆಚ್ಚಿ
ಪೆಸರುಳಿಸಿತಣ್ಣ ಉಳಿಸಿತು ಆ ನುಡಿ ಅಮೃತದ ನುಡಿ
ಹನುಮಂತದೇವರಿಗೆ ವಜ್ರಕಾಯವ ಮಾಡಿತು
ಅಂಬುಧಿಯ ಹಾರಿ ಲಂಕೆಯ ಸುಟ್ಟು ರಕ್ಕಸರ ಮಡುಹಿ
ಸತ್ಯಲೋಕದ ಪದವಿಯನಿತ್ತು ಸಲಹಿತಣ್ಣ ಸಲಹಿತು
ವಿಭೀಷಣನ ಚಿರಂಜೀವಿಯ ಮಾಡಿತು
ಅಂಜದಿರಣ್ಣಾ ಅಂಜದಿರಯ್ಯ ಅಂಜದಿರು
ಮೆಚ್ಚದಿರಯ್ಯಾ ಮೆಚ್ಚದಿರು ಮೆಚದಿರಣ್ಣಾ ಮೆಚ್ಚದಿರು ||

ಗಜಪುರವೆಂಬೋ ಪಟ್ಟಣದೊಳಗೆ
ಶ್ರೀಶುಕನೆಂಬೋ ಪಕ್ಷಿ ನುಡಿಯಲಾಗಿ
ಪರೀಕ್ಷಿತನೆಂಬವ ಶಕುನ ಕೇಳಿ
ಇಂದ್ರಿಗಳನೆ ನಿಗ್ರಹಿಸಿ ಏಕಾಗ್ರಚಿತ್ತದಲಿ ಬಂಧಿಸಿ
ಅರಿಷಡ್ವರ್ಗಗಳನ್ನೆ ತರಿದು
ಹಿಂದಿನ ಹಕ್ಕಿಶಕುನದ
ಫಲಗಳನುಂಡವರ ಮಾತು ಕೇಳಿದರಣ್ಣಾ ಕೇಳಿದರು
ಅವರ್ಯಾರು ಎಂದರೆ
ಅಂಬರೀಷರಾಯ
ಪಶುಯೋನಿಗೆ ಬಂದ ಗಜರಾಯ
ಶಿಶುವಾಗಿದ್ದ ಧ್ರುವ, ಪ್ರಹ್ಲಾದ, ಉದ್ಧವ, ಅಜಾಮಿಳ
ಇವರನೇಕರಿಗೆ ಫಲವಾಯಿತಣ್ಣಾ ಫಲವಾಯಿತು
ಅಂಜದಿರಣ್ಣಾ ಅಂಜದಿರು ಅಂಜದಿರಯ್ಯ ಅಂಜದಿರು
ಮೆಚ್ಚದಿರಯ್ಯಾ ಮೆಚ್ಚದಿರು ಮೆಚದಿರಣ್ಣಾ ಮೆಚ್ಚದಿರು ||

ಈ ಸಂಸಾರವೆಂಬೋ ಮರ್ಕಟನಾಟಕವಾ ಮೆಚ್ಚದಿರು
ಉಚ್ಚೆ ಬಚ್ಚಲು ಎಂಬೊ ಕುಕ್ಷಿಯಲಿ ಪುಟ್ಟಿ
ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ
ಪುಟ್ಟಿ ಪುಟ್ಟಿ ಎಲುವಿನ ಪಂಜರ
ನರಗಳ ಬಿಗುವು ತೊಗಲಿನ ಹೊದ್ದಿಕೆ
ರೋಮಗಳ ಕಸ
ಮಧ್ಯ ಮಾಂಸಗಳ ತಿತ್ತಿ
ಈ ನವದ್ವಾರಗಳಿಂದ ಜನಿಸಿದ
ದುರ್ಗಂಧ ಶರೀರವ ಮೆಚ್ಚದಿರು
ಬಿಡು ಬಿಡು ಕಾಮವ ಬಿಡು
ಕ್ರೋಧವ ಬಿಡು, ಲೋಭವ ಬಿಡು
ಮೋಹವ ಬಿಡು , ಮದಮತ್ಸರಹಂಕಾರವ ಬಿಡು
ನೋಡು ನೋಡು ನಿನ್ನೊಳಗೆ
ನೀನೇ ತಿಳಿದು ನೋಡು
ಮನವ ನರಹರಿಯ ಚರಣಕ್ಕೆ ಸಮರ್ಪಣೆಯ ಮಾಡು
ಬೇಡು ಬೇಡು
ಆತನ ಚರಣವ ಬಿಡದಿರು
ಹರಿದಾಸರ ಸಂಗವ ಬಿಡದಿರು
ಎನ್ನ ಶಕುನದಲಿ ವಿಶ್ವಾಸವ ಬಿಡದಿರು
ಇದೇ ಮುಕುತಿಪಥಕೆ ಪಥ
ಶ್ರೀ ಪುರಂದರವಿಠಲನ್ನ ನಾಮ ಸಂಕೀರ್ತನೆಯ ಬಿಡದಿರು ||
***

 
ರಾಗ ಪಕ್ಷಿಶಕುನ ಏಕತಾಳ

pallavi

jayavade jayavade I manatanake bahaLa jayavade

caraNam 1

hakki nuDiyidaNNa nuDiyidu hakki nuDiyidu ondu shabhavacana
hakki nuDiyidu oNderaDarkSara eraDu mUvatteraDAgi nuDiyidu
vAlmIkana uddharisidu hakki shakunavu mukkaNNage jayavAyitu
pAravtige mAngalyavAyitu IrELu jagadoLage mecci pesaruLisidaNN uLisidu
A nuDi amrtada nuDi hanumanta dEvarige vajra kAyava mADidu
ambudhiya hAri lankeya suTTu rakkasara maDuhi satyalOkada
padaviyanittu salahidaNNa salahidu vibhISaNana ciranjIviyane mADidu
lankake bhUpatiyena mADidu anjadiraNNA anjadirayyA anjadiru
meccadirayyA meccadiru meccadiraNNA meccadiru

caraNam 2

gajapuravembo paTTaNadoLage shrI shakanembo pakSi
nuDiyalAgi parIkSitanembuva shagunava kELi indriyangaLane
nigrahisi EkAgra cittadali bandhisi ariSTvargagaLanne taridu
hindina hakki shagunada phalagaLanuNDavara mAtu kELidaraNNA
kELidaru avar yAru endhare ambarISarAya pashuyOnige banda gajarAya
shishuvAgidda dhruva prahlAda uddhava ajAmiLa ivaranEkarige
phalavAyitaNNA phalavAyitu anjadiraNNA anjadiru anjadirayyA
anjadiru meccadarayyA meccadiru meccadiraNNA meccadiru

caraNam 3

I samsAravembo markaTa nATakavu meccadiru ucce baccalu embo
kukSiyali puTTi embhatta nAlku lakSayOnigaLalli puTTi puTTi elubina panjara
naragaLa biguvu togalina hoddige rOmagaLa kasa madhya mAmsagaLa bitti
nava dvAragaLinda janisida durgandha sharIrava meccadiru biDu biDu
kAmava biDu krOdhava biDu lObhava biDu mOhava biDu madamatsara
hankArava biDunODu nODu ninnoLage nInE tiLidu nODu manava
narahariya caraNakke samarpaNeya mADu bEDu bEDu Atana caraNava
biDadiru hari dAsara sangava biDadiru enna shakunadali vishvAsava biDadiru
idE mukuti padake patha shrI purandara viTTalanna nAma sankItaneya biDadiru
***

pallavi

jayavade jayavade (jOgipada). rAgA: ?. Eka tALA.

1: jayavade jayavade manetanake bhayavilla endendigu nijavu
biDu biDu biDu biDu mana samshayava
sukhanembahakki hELutadappa jagavembA giDa huTTitaNNa
hakkigaLeraDu kUDaidAve haNNugaLeraDu aidAvappa
mUru mUru guNa kELaNNa haNNInoLage nAlgu rasavappa
aidu doDDag gari kANaNNa Aru bageya svarUpa kELu
Elu bageya kengalu baNNa saNNa garigaLu eNTaidAve akSavu
adake ombattaite elegLu hattu aidAvappa ondE hakki haN tintaite
mattondhakki nODutadappa haN tindahakki baDavAgaite
tinnada hakki balavAgaite ondE kulavendtiLiyalu bEDa
tiLidare ninage kEDAdItu dAsa tatvata Adi kANanna
haLe vastrava bisADaNNa hosa vastrava nimage dEvar koTTAnu
hakkiya arasa hELida mAtu uttama mArga hiDiyO tamma
mArgava kaTTi suliyutAre mAranembuva kaLLaitAne
purandanAdaru biDuvavanalla guruvina sangati hiDiyO aNNa
kiviyu mUgU nAligeyappa ondondu ninna kondAvaNNa
kuranga mAtanga patanga kELu bhrnga mInavu hatavAitaNNa
jnAna bhaktigaLemba eraDu mArgangaLu baruva tanaka
eraDu maneyoLagira bEkaNNa dAnada kai tOrisa bEkappa
Adarinda bhavanadi dATaNNa ninna yOgyate tiLida mElE
purandara viTTala sthaLa koTTAnu
***


ಜಯವದೆ ಜಯವದೆ ಈ ಮನೆತನಕೆ
ಭಯವಿಲ್ಲ ಎಂದೆಂದಿಗು ನಿಜವು
ಬಿಡು ಬಿಡು ಬಿಡು ಬಿಡು ಮನಸಂಶಯವ
ಶುಕನೆಂಬ್ಹಕ್ಕಿ ಹೇಳುತದಪ್ಪ
ಜಗವೆಂಬಾ ಗಿಡ ಹುಟ್ಟಿತಣ್ಣ
ಹಕ್ಕಿಗಳೆರಡು ಕೂಡೈದಾವೆ
ಹಣ್ಣುಗಳೆರಡು ಐದಾವಪ್ಪ
ಮೂರು ಮೂರು ಗುಣ ಕೇಳಣ್ಣ
ಹಣ್ಣಿನೊಳಗೆ ನಾಲ್ಕು ರಸವಪ್ಪ
ಐದು ದೊಡ್ಡ ಗರಿ ಕಾಣಣ್ಣ
ಆರು ಬಗೆಯ ಸ್ವರೂಪ ಕೇಳು
ಏಳು ಬಗೆಯ ಕೆಂಗಲು ಬಣ್ಣ
ಸಣ್ಣ ಗರಿಗಳು ಎಂಟೈದಾವೆ
ಅಕ್ಷವು ಅದಕೆ ಒಂಭತ್ತೈತೆ
ಎಲೆಗಳು ಹತ್ತು ಐದಾವಪ್ಪ
ಒಂದೇ ಹಕ್ಕಿ ಹಣ್ ತಿಂತೈತೆ
ಮತ್ತೊಂದ್ಹಕ್ಕಿ ನೋಡುತದಪ್ಪ
ಹಣ್ ತಿಂದ್ಹಕ್ಕಿ ಬಡವಾಗೈತೆ
ತಿನ್ನದ ಹಕ್ಕಿ ಬಲವಾಗೈತೆ
ಒಂದೇ ಕುಲವೆಂದ್ತಿಳಿಯಲುಬೇಡ
ತಿಳಿದರೆ ನಿನಗೆ ಕೇಡಾದೀತು
ದಾಸತತ್ವದ ಆದಿ ಕಾಣಣ್ಣ
ಹಳೇ ವಸ್ತ್ರವ ಬಿಸಾಡಣ್ಣ
ಹೊಸವಸ್ತ್ರ ನಿಮದೇವರ್ ಕೊಟ್ಟಾನು
ಹಕ್ಕಿಯ ಅರಸ ಹೇಳಿದ ಮಾತು
ಉತ್ತಮಮಾರ್ಗವ ಹಿಡಿಯೋ ತಮ್ಮ
ಮಾರ್ಗವ ಕಟ್ಟಿ ಸುಲಿಯುತಾರೆ
ಮಾರನೆಂಬುವ ಕಳ್ಳೈದಾನೆ
ಪುರಂದರನಾದರೂ ಬಿಡುವವನಲ್ಲ
ಗುರುವಿನ ಸಂಗತಿ ಹಿಡಿಯೋ ಅಣ್ಣ
ಕಿವಿಯೂ ಮೂಗೂ ನಾಲಿಗೆಯಪ್ಪ
ಒಂದೊಂದೂ ನಿನ್ನ ಕೊಂದಾವಣ್ಣ
ತುರಂಗಮಾತಂಗಪತಂಗ ಕೇಳು
ಭೃಂಗಮೀನವು ಹತವಾಯ್ತಣ್ಣ
ಜ್ಞಾನಭಕ್ತಿಗಳೆಂಬ ಎರಡು
ಮಾರ್ಗಗಳು ಬರುವ ತನಕ
ಎರಡೂ ಮನೆಯೊಳಿರಬೇಕಣ್ಣ
ದಾನದ ಕೈ ತೋರಿಸಬೇಕಪ್ಪ
ಅದರಿಂದ ಭವನದಿ ದಾಟಣ್ಣ
ನಿನ್ನ ಯೋಗ್ಯತೆ ತಿಳಿದ ಮೇಲೆ
ಪುರಂದರವಿಟ್ಠಲ ಸ್ಥಳ ಕೊಟ್ಟಾನು ||
ಜಯವದೆ ಜಯವದೆ ಈ ಮನೆತನಕೆ||
*********

Sri Purandaradasaru has composed a song in the form of a folk song or budabudike song –


ಜಯವದೆ ಜಯವದೆ ಮನೆತನಕೆ

ಬಿಡುಬಿಡು ಬಿಡುಬಿಡು ಮನ ಸಂಶಯವ |
ಶುಕನೆಂಬಕ್ಕಿ ಹೇಳುತದಪ್ಪ | 
ಜಗವೆಂಬೋ ಗಿಡ ಹುಟ್ಟೈತಣ್ಣ |
ಹಣ್ಣುಗಳೆರಡು ಐದಾವಪ್ಪ | 
ಮೂರು ಬುಡದ ಗಿಡ ಕೇಳಣ್ಣ |
ಹಣ್ಣಿನ ಒಳಗೆ ನಾಲ್ಕು ರಸವು | 
ಐದು ದೊಡ್ಡ ಹರೆ ಕಾಣಪ್ಪ |
ಆರು ಬಗೆಯ ಸ್ವರೂಪ ಕೇಳು | 
ಏಳು ಬಗೆಯ ತೊಗಟುಂಬಣ್ಣ |
ಸಣ್ಣಗರಿಗಳು ಎಂಟೈದಾವೆ | 
ಅಕ್ಷವು ಇದಕೆ ಒಂಭತ್ತೈತೆ |
ಎಲೆಗಳು ಹತ್ತು ಐದಾವಪ್ಪ | 
ಒಂದೇ ಹಕ್ಕಿ ಹಣ್ತಿಂತೈತಿ |
ಮತ್ತೊಂದ್ ಹಕ್ಕಿ ನೋಡುತದಪ್ಪ | 
ಹಣ್ತಿಂದ್ ಹಕ್ಕಿ ಬಡವಾಗೈತೆ |
ತಿನ್ನದ ಹಕ್ಕಿ ಬಲಿತೈತಣ್ಣ | 
ಸುಳ್ಳಲ್ಲ ನೀ ಕೇಳೊ ತಮ್ಮ |
ದ್ವಾಸುಪರ್ಣ ಶೃತಿಯಲ್ಲೈತೆ | 
ಒಂದೇ ಕುಲದ ಹಕ್ಕಲ್ಲಣ್ಣ |
ಒಂದೇ ಕುಲವೆಂದು ತಿಳಿಯ ಬೇಡ | 
ತಿಳಿದರೆ ನಿಮಗೆ ಕೇಡಾದೀತು |
ಹಳೇ ವಸ್ತ್ರವ ಬಿಸಾಡಣ್ಣ | 
ಹೊಸಾ ವಸ್ತ್ರವ ದೇವರು ಕೊಟ್ಟಾನು |
ಹಕ್ಕಿಯ ಅರಸ ಆಡಿದ ಮಾತು | 
ಉತ್ತಮ ಮಾರ್ಗ ಹಿಡಿಯೋ ತಮ್ಮ |
ಮಾರ್ಗವ ಕಟ್ಟಿ ಸುಲಿಯುತ್ತಾರೆ | 
ಗಿರಿದುರ್ಗಂಗಳು ಐದಾವಪ್ಪ |
ಮಾರನೆಂಬ ಕಳ್ಳ ಐದಾನಪ್ಪ | 
ಸಮೀರನಾದರೆ ಹೊರಟ್ ಹೋಗ್ತಾನೆ |
ಪುರಂದರನಾದರೆ ಬಿಡುವೋನಲ್ಲ|
ಸುರಜ್ಯೇಷ್ಠನ ಸಂಗತಿ ಹಿಡಿಯೋ ತಮ್ಮ |
ಕಣ್ಣು ಮೂಗು ಕಿವಿ ನಾಲಿಗೆಯಪ್ಪ | 
ಒಂದೊಂದೊಬ್ಬರೆ ಕೊಂದಾವಣ್ಣ |
ಕುರಂಗ ಮಾತಂಗ ಪತಂಗ ಕೇಳೋ | 
ಭೃಂಗಾ ಮೀನಾ ಹತವಾದ್ವಣ್ಣ |
ಜ್ಞಾನ ಭಕ್ತಿ ಎಂಬ ಮಾರ್ಗವು ಎರಡು | 
ದೊಡ್ಡ ಮಾರ್ಗವ ಹಿಡಿಬೇಕಣ್ಣ |
ದೊಡ್ಡ ಸಂಗತಿ ಬರುವೋ ತನಕ 
ಎರಡೂ ಮನೆಯಲ್ಲಿರಬೇಕಣ್ಣ |
ದಾನಕ ಕೈಯ ತೋರಿಸಬೇಕು | 
ಅದರಿಂದ ನದಿಯ ದಾಟುವೆಯಪ್ಪ |
ನಿನ್ನ ಯೋಗ್ಯತೆ ತಿಳಿದಾ ಮೇಲೆ 
ಪುರಂದರ ವಿಠಲ ಸ್ಥಳ ಕೊಟ್ಟಾನು ||

जयवदॆ जयवदॆ मनॆतनकॆ बिडुबिडु बिडुबिडु मन संशयव ।

शुकनॆंबक्कि हेळुतदप्प ।  जगवॆंबो गिड हुट्टैतण्ण ।
हण्णुगळॆरडु ऐदावप्प । मूरु बुडद गिड केळण्ण ।
हण्णिन ऒळगॆ नाल्कु रसवु । ऐदु दॊड्ड हरॆ काणप्प ।
आरु बगॆय स्वरूप केळु । एळु बगॆय तॊगटुंबण्ण ।
सण्णगरिगळु ऎंटैदावॆ । अक्षवु इदकॆ ऒंभत्तैतॆ ।
ऎलॆगळु हत्तु ऐदावप्प । ऒंदे हक्कि हण्तिंतैति ।
मत्तॊंद् हक्कि नोडुतदप्प । हण्तिंद् हक्कि बडवागैतॆ ।
तिन्नद हक्कि बलितैतण्ण । सुळ्ळल्ल नी केळॊ तम्म ।
द्वासुपर्ण शृतियल्लैतॆ । ऒंदे कुलद हक्कल्लण्ण ।
ऒंदे कुलवॆंदु तिळिय बेड । तिळिदरॆ निमगॆ केडादीतु ।
हळे वस्त्रव बिसाडण्ण । हॊसा वस्त्रव देवरु कॊट्टानु ।
हक्किय अरस आडिद मातु । उत्तम मार्ग हिडियो तम्म ।
मार्गव कट्टि सुलियुत्तारॆ । गिरिदुर्गंगळु ऐदावप्प ।
मारनॆंब कळ्ळ ऐदानप्प । समीरनादरॆ हॊरट् होग्तानॆ ।
पुरंदरनादरॆ बिडुवोनल्ल । सुरज्येष्ठन संगति हिडियो तम्म ।
कण्णु मूगु किवि नालिगॆयप्प । ऒंदॊंदॊब्बरॆ कॊंदावण्ण ।
कुरंग मातंग पतंग केळो । भृंगा मीना हतवाद्वण्ण ।
ज्ञान भक्ति ऎंब मार्गवु ऎरडु । दॊड्ड मार्गव हिडिबेकण्ण ।
दॊड्ड संगति बरुवो तनक ऎरडू मनॆयल्लिरबेकण्ण ।
दानक कैय तोरिसबेकु । अदरिंद नदिय दाटुवॆयप्प ।
न्न योग्यतॆ तिळिदा मेलॆ पुरंदर विठल स्थळ कॊट्टानु ।
********