Showing posts with label ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು gurumahipati. Show all posts
Showing posts with label ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು gurumahipati. Show all posts

Wednesday, 1 September 2021

ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ರಂಗ ಬಂದಾ ನಮ್ಮ ಭಂಗಿಸಿ ಕಾಳಿಯ ಫಣಿಯಲಿಂದು ಪ 


ವಿಷಧರನುರಿಯಿಂದ ನಿಸಿದಿನಿ ಕುದಿಯುತಿಹ | ವಿಷಮಡುವನೆ ಪೊಕ್ಕು ಕುಶಲದಿಂದಲಿ ರಂಗ ಬಂದಾ 1 

ಉರಗೇಂದ್ರ ಬಂದನದಿ ಶರೀರ ಬೆಳಿಸಿ ತನ್ನ | ಬಿರಿವಂತವನತನು ಹರಿಸಿ ಮದವಾ2 

ನೂರೊಂದು ಹೆಡೆಗಳ ಚರಣದಲೊತ್ತಿ ತುಳಿದು | ಸುರರಾ ಗೀತದಿ ನೃತ್ಯ ಚರಿತವ ದೋರಿ 3 

ಸತಿಯರ ಮೊರೆಕೇಳಿ ಪತಿದಾನವನೆ ಕೊಟ್ಟು | ಕ್ಷಿತಿಯೊಳು ಗೋಕುಲದುನ್ನತ ಭಾಗ್ಯದಲಿ 4 

ತಂದೆ ಮಹಿಪತಿ ನಂದನ ಪ್ರಭು ಸ್ವಾ | ನಂದವ ಸುರನರ ವೃಂದಕ ಬೀರಿ 5

***