Showing posts with label ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ hayavadana. Show all posts
Showing posts with label ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ hayavadana. Show all posts

Wednesday, 1 September 2021

ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ ankita hayavadana

 ..

ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ

ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ ತಾಯಿ ತಮ್ಮ ಪ.


ಚಿನ್ನದ ಸರಪಣಿಯ ಚೆಲುವ ಪೊನ್ನಮಣಿಯ

ರÀನ್ನದ ನೇಣ ತುದಿಯ ರಮಣಿಯರೆಲ್ಲರರ್ಥಿಯ1

ಈ ಮೈಯಲ್ಲಿ ಮಲಗಿಪ್ಪ ಈ ಮಹಾಲಕ್ಷ್ಮಿಯ ನೋಳ್ಪ

ಸನ್ಮೋದನೆನಿಪ ಶೇಷಶಯನನ ವಟತಲ್ಪ 2

ಇಂದಿರೆ ಇಷ್ಟವನೀವ ಇಂದಿರೆಗಿವನು ಧವ

ಎಂದೆಂದು ಭಕ್ತರ ಕಾವ ಎಸೆÉವ ಮಂಚದ ದೇವ 3

ಬಾರಯ್ಯ ಭಕ್ತರಬಂಧು ಬಾರಯ್ಯ ಕರುಣಾಸಿಂಧು

ಬಾರಯ್ಯ ಹರುಷದಿ ಇಂದು ಬಾರಯ್ಯ ಮುಕುಂದನೆಂದು 4

ಕುಂಜರ ಕೂಗಲು ಬಂದೆ ಕೂಡೆ ಮಕರಿಯ ಕೊಂದೆ

ಕಂಜಾಕ್ಷ ಕಾಮನ ತಂದೆ ಕಾಯೆಂದು ಪಾಡಲು ಬಂದೆ 5

ಕಾಕರ ಗಂಟಲಗಾಣ ಕಾಮಿಸದೆನ್ನಯ ಮನ

ಏಕೋದೇವನೆಂಬ ಜಾಣ ಏರಿದ ಮಣಿಯ ನೇಣ 6

ಸಕಲ ನಿಗಮನೀತ ಅಖಿಳ ಸುರರ ತಾತ

ರುಕುಮಿಣಿ ಪ್ರಾಣನಾಥ ರೂಢಿಗತಿಯ ಪ್ರತಿ ಈತ 7

ಮಾಯದ ದೈತ್ಯರ ಕೊಂದು ಮಲಗಬೇಕೆಂದು

ಬಂದು ಹಯಗ್ರೀವರಾಯ ನಿಂದು ಹರುಷವ ತಾಳ್ದನೆಂದು 8

ಮುಂದೆ ದೇವಾಂಗನೆಯರು ಮುಖಸುತ್ತ ಮುಕ್ತಿಸುರ

ವೃಂದದ ಮಧ್ಯದೊಳರವಿಂದಾಕ್ಷಿ ಪೊಳವುತ್ತಿರೆ 9

ಅಪ್ಸರಸ್ತ್ರೀಯರ ನೃತ್ಯ ಅಪ್ಪಂತ ಗಂಧರ್ವಗೀತ

ಒಪ್ಪುವ ತಾಳಗಳೊಪ್ಪೆ ಒರಗಿಪ್ಪ ದೇವನುತ 10

ಮಾನ್ಯ ಶ್ರೀ ಹಯವದನ್ನ ಮನದ ಮಧುಸೂದನ್ನ

ಎನುತ ತೂಗುವ ಜನ ಎಂದೆಂದು ಭಕ್ತಮೋದನ11

***