ದಂಭಕ ಭಕುತಿಯ ಮಾಡಬೇಡ ಬರಿ
ಡಿಂಭವ ಪೋಷಿಸೆ ಪಾಡಬೇಡ ಪ
ಅಂಬುಜನಾಭವ ಬಿಡಬೇಡ ಒಣ
ಜಂಭವ-ಮಾಡುತ-ಕೆಡಬೇಡ ಅ.ಪ.
ಕಾಸಿಗೆ ದಾಸನು ಆಗಬೇಡ-ಹರಿದಾಸನು ಆದರೆ ಆಶೆಬೇಡ
ಮೋಸದ ವೇಷವ ತೋರಬೇಡ-ಸುಖ ಲೇಶವು
ದೊರಕದು ತಿಳಿಗಾಢ 1
ಕಂಡಕಂಡೆಡೆ ತಿರಿಬೇಡ-ಯಮದಂಡಕೆ ಬೆದರದೆ ನಡಿಬೇಡ
ಪುಂಡರ ಸಂಗವ ಸೇರಬೇಡ-ಹರಿತೊಂಡರ
ಕೆಣಕುತ ಕೆಡಬೇಡ 2
ಕೆಂಡದ ಕೋಪವ ಮಾಡಬೇಡ-ಅದು ಗಂಡವು
ಮುಂಬರೆ ತಿಳಿಮೂಢ
ದಂಡದಿ ಕಾಲವ ಕಳಿಬೇಡ ಪರ ಹೆಂಡಿರು ವಿತ್ತವ ನೋಡಬೇಡ 3
ತುಚ್ಛರ ಸೇವೆಯ ಮಾಡಬೇಡ ಮನಸ್ವಚ್ಛತೆ ಪೊಂದದೆ ಇರಬೇಡ
ಕೆಚ್ಚೆದೆ ಕಷ್ಟದಿ ಬಿಡಬೇಡದೈವೇಚ್ಛೆಯೆ ಸಕಲಕು ಮರಿಬೇq4
ಆತ್ಮಸ್ತುತಿಯನು ಮಾಡಬೇಡ ಪರಮಾತ್ಮನ ಗುಣಗಳ ಕದಿಬೇಡ
ಗಾತ್ರವು ಅಸ್ಥಿರ-ತಿಳಿ-ಬೇಗ-ಜೀವೋತ್ತಮ ನಂಘ್ರಿಯ ಬಿಡಬೇಡ 5
ಕರ್ಮವ ಮಾಡದೆ ಬಿಡಬೇಡ-ಶೃತಿ ಮರ್ಮವ
ತಿಳಿಯದೆ ಇರಬೇಡ
ಹಮ್ಮಿನಮಾತನು ಆಡಬೇಡ ಪರಧರ್ಮಕೆ
ಮನವನು ಸೋಲಬೇಡ 6
ನೋಡದ ವಿಷಯವ ನುಡಿಬೇಡ ಗುಣ ನೋಡದೆ
ಸ್ನೇಹವ ಮಾಡಬೇಡ
ಪಾಡದೆ ದೇವನ ಇರಬೇಡ ಭವ ಕಾಡಿಗೆ ಕಿಚ್ಚಿದು ಸರಿ ಪ್ರೌಢ 7
ನೆಂಟಗೆ ಸಾಲವ ಕೊಡಬೇಡ ಅದು ಗಂಟಿಗೆ ಮೊಸವೆ ತಿಳಿಬೇಗ
ಒಂಟಿಲಿ ಊಟವ ಮಾಡಬೇಡ ವೈಕುಂಠಕೆ ಸಾಧನೆ ಬಿಡಬೇಡ 8
ಹಿರಿಯರ ಪಿತೃಗಳ ಜರಿಬೇಡ ಅದು ನರಕದ
ದಾರಿಯು ಮರಿಬೇಡ
ಪರಿಪರಿ ಚಪಲವ ಮಾಡಬೇಡ ನಿಜಗುರುವನು
ಒಲಿಸದೆ ಬಿಡಬೇಡ 9
ಮಡಿ ಮಡಿ ಎನ್ನುತ ಹಾರಬೇಡ-ನಿಜ ಮಡಿ ಹರಿ
ಚಿಂತನೆ ತಿಳಿಬೇಗ
ಕಡು ಆಲಸ್ಯವ ಮಾಡಬೇಡ ಸಿರಿಬಿಡುವಳು ಆತನ ತಿಳಿಬೇಗ10
ಸಾಧು ಸುಸಂಗವ ಧೃಡಸೇರು ಅದು ಮಾಧವ
ನೊಲಿಮೆಗೆ ಹೆದ್ದಾರಿ
ಮೋದದ ತೀರ್ಥದಿ ಮಡಿಮಾಡು ಭವಖೇದವ
ಶೀಘ್ರದಿಪೊಗಾಡು 11
ಸತ್ಯವ ಧರ್ಮವ ಬಿಡಬೇಡ ಈ ಉಕ್ತಿಗಳಾಚೆಗೆ ಹಾಕಬೇಡ
ಸತ್ಯವ ಪಠಿಸದೆ ಬಿಡಬೇಡ-ಶ್ರೀ ಸತ್ಯನ ಮತವನು ಪಿಡಿಬೇಗ12
ತೃಷೆಯ ಬಹುವಿಧ ಮಾಡಬೇಡ ಸಂತುಷ್ಠಿಯೆ
ನಿಜಸುಖ ತಿಳಿಬೇಗ
ನಿಷ್ಠಿಯ ಗುರುವಡಿ ಬಿಡಬೇಡ “ಶ್ರೀ ಕೃಷ್ಣವಿಠಲ”ನ ತೊರಿಬೇಡ13
****