ಎಲ್ಲಿ ನೋಡಿದರಲ್ಲಿ ರಾಮ – ಇದ ||pa||
ಬಲ್ಲ ಜಾಣರ ದೇಹದೊಳಗೆ ನೋಡಣ್ಣ ||apa||
ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು |
ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ||1||
ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸ|
ಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ||2||
ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರ|
ಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ||3||
ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು||4||
ರೂಢಿಯೊಳಗೆ ಶುದ್ಧ ಮೂಢ – ಈಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ – ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ ||5||
***

Elli nodidaralli raamaa | ida |
Balla jaanara dehadalli nodannaa || pa ||
Kanne kaamana beeja |
kannindale nodu |
Moksha saamraajya | kannina mooruti bigidu |
Ola kannindale devara nodanna || 1 ||
Mooge shwaasa nishwaasa |
Moogimdale kaano yoga sanyaasa |
Mooganaadare vishesha |
Mooginda nodanna leelaa vilaasa || 2 ||
Kiviye karmakke dwaara |
Kiviyindale kelo mokshada saaraa |
Kiviye karma kuthaaraa |
Olagiviyalli kaano naadada bera || 3 ||
Bommanu maadida tanu bittu |
Vishwa karmanu maadida bombeyanittu |
Summane koogugalittu |
Ada nambuvenembone poda kangettu || 4 ||
Roodhiyolage shuddha moodha |
Kaadu kallugalannu nambalu bedaa |
Naadaadi daivagalellaa namma |
Baadadaadikeshavanobbane ballaa || 5 ||
***