.ರಾಗ : ಭೌಳಿ ಆದಿತಾಳ
Audio by Sri Sumukh Maudgalyaವಾಳವೇಕರ್ ಶ್ರೀ ಭೀಮಾಚಾರ್ಯ ವಿರಚಿತ"
( ಶ್ರೀಶಪ್ರಸನ್ನಕೇಶವವಿಠಲಾಂಕಿತ )
"ಜಂಬುಖಂಡಿ ಶ್ರೀವಾದಿರಾಜಾಚಾರ್ಯರ ಸ್ತೋತ್ರ ಪದ"
ಮಾಧ್ವಗ್ರಂಥದಿ ಶೋಭಿಪ ಬುಧವರನ್ಯಾರೆ ಪೇಳಮ್ಮಯ್ಯ
॥ಪ॥
ಮಧ್ವಾಬ್ಧಿಗೆ ಅಭಿವೃದ್ಧಿದ ಚಂದ್ರಮ
ಮಾಧ್ವಭಕ್ತಗುರುಮುಖ್ಯಕಾಣಮ್ಮಯ್ಯ॥ಪ॥
ಜಂಬುಖಂಡಿಗ ಶ್ರೀನಿವಾಸಶರೀರಜನ್ಯಾರೇ
ಕಂಬುಧರನ ದಿವ್ಯನೃತ್ಯದಿ ಒಲಿಸುವನ್ಯಾರೇ
ಬಿಂಬಜ್ಞಾನದಿ ಚೇತೋಮಲಹರನ್ಯಾರೇ
ನಂಬಿದ ಜನರಿಗೆ ಅಂಬುಜಾಕ್ಷನ ಕೊಡುವ
ಶಂಬರಾರಿಜನಕ ಭಕ್ತಾಗ್ರಣಿ ಕಾಣಮ್ಮ॥೧॥
ರಾಜರು ಋಜುಗತರ್ಹೌದೆಂದು ಘೋಷಿಪನ್ಯಾರೆ
ವಾಜಿಮುಖನೆ ಉದ್ಧಾರಕನೆಂಬುವನ್ಯಾರೆ
ಬೀಜಮಾತವು ಪೇಳೆ ದುರ್ಲಭರೆಂಬುವನ್ಯಾರೆ
ರಾಜರ ಮೃತ್ತಿಕೆ ರಾಜಿತ ಫಣಿ ಬಹು
ಸೋಜಿಗ ಎನಿಸುವ ಗುರೂಪ ಕಾಣಮ್ಮ॥೨॥
ಶ್ರೀಶಪ್ರಸನ್ನಕೇಶವವಿಠಲೈ ಂಬುವನ್ಯಾರೆ
ಸೋಸಿಲಿಂದ ಸುಧಾಭಾವ ಪೇಳುವನ್ಯಾರೆ
ಶ್ರೀಶನ ಪರಮಾದೇಶದಿ ನಡೆಯುವನ್ಯಾರೆ
ಶ್ರೀಷಟ್ಪುರಾರ್ಯರ ಆಶೆ ಪೂರೈಸುವ
ವ್ಯಾಸಮರುದ್ಗುರು ದಾಸ ಕಾಣಮ್ಮ॥೩॥
***