Showing posts with label ಗುರುರಾಜ ನಿನ್ಹೊರೆತು ಪೊರೆವ ದೊರೆಗಳ ಕಾಣೆ kapila. Show all posts
Showing posts with label ಗುರುರಾಜ ನಿನ್ಹೊರೆತು ಪೊರೆವ ದೊರೆಗಳ ಕಾಣೆ kapila. Show all posts

Monday, 6 September 2021

ಗುರುರಾಜ ನಿನ್ಹೊರೆತು ಪೊರೆವ ದೊರೆಗಳ ಕಾಣೆ ankita kapila

ರಾಗ: ಕಾಂಭೋಜಿ ತಾಳ: [ಆದಿ/ತ್ರಿಪುಟ]

ಗುರುರಾಜನಿನ್ಹೊರೆತು ಪೊರೆವ ದೊರೆಗಳ ಕಾಣೆ

ಮೂರು ಜನುಮಗಳಲ್ಲಿ ಮುರಹರನ ಭಜಿಸಿದಿ ನೀ 1

ತರುಳಪ್ರಹ್ಲಾದನಾಗಿರಲು ಭಕುತಿಯಿಂದೆ

ನರಹರಿಯ ಮೆಚ್ಚಿಸಿದೆ ಪರಮಕರುಣಾಸಿಂಧು 2

ವ್ಯಾಸಮುನಿಯು ನೀನೆ ವಾಸುದೇವನ ಭಜಿಸಿ

ಲೀಸಾಚಂದ್ರಿಕೆಯ ಭೂಸುರರಿಗೆ ಕರುಣಿಸಿ 3

ಶ್ರೀರಾಮಚಂದ್ರಪಾದ ಸರಸೀರುಹಾಭೃಂಗಾ

ಶ್ರೀರಾಘವೇಂದ್ರಯತಿ ಸುರಚಿರಕೃಪಾಂಗ 4

ಮಂತ್ರಾಲಯ ನಿವಾಸ ಜಗದೀಶದಾಸ

ನಿನ್ನ ಸ್ಮರಣೆಯೇ ಉಲ್ಲಾಸಕಾಯೇ ಕರುಣಿಗಳರಸ 5

ನಂಬಿದೆ ನಿನ್ನ ಪಾದವಯ್ಯಾ ಉದ್ಧರಿಸೋ ಜೀಯಾ

ಭವರೋಗವೈದ್ಯಾ ಬಂದುಪಿಡಿಯೋಕೈಯ್ಯಾ 6

ಗುರುಸಾರ್ವಭೌಮನೆ ಕರುಣಾಸಾಂದ್ರನೇ

ಕಾಯೇ ಯತೀಂದ್ರನೇ ನಂಬಿದೆ ಪಾದದ್ವಂದಗಳನೆ 7

ಶ್ರೀರಾಮ ಪೂಜಿಸಿ ಮಧ್ವಮತವನುದ್ಧರಿಸಿ

ರಾಶಿಪುಣ್ಯವ ಗಳಿಸಿ ಭಕ್ತರಿಗೆ ಅನುಗ್ರಹಿಸಿ 8

ಕಪಿಲನಾಮಕಪರಮಾತ್ಮಗೆ ಬಹುಪ್ರೀತಿಪಾತ್ರನೆ

ತುಂಗಾತೀರವಾಸನೆ ಆಶ್ರಿತಜನರಕ್ಷಕನೇ 9

***