Showing posts with label ಪತಿತಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ sirigovinda vittala. Show all posts
Showing posts with label ಪತಿತಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ sirigovinda vittala. Show all posts

Monday 2 August 2021

ಪತಿತಪಾವನ ಗೋವಿಂದ ನಮ್ಮ ಪದುಮದಳಾಕ್ಷ ಸದಾನಂದ ankita sirigovinda vittala

ಪತಿತ ಪಾವನ ಗೋವಿಂದ

ನಮ್ಮ ಪದುಮದಳಾಕ್ಷ ಸದಾನಂದ ಪ


ಸತಿಪತಿ ನುತ ಸಾರ್ವಭೌಮ ಸು

ವೃತಾ ಚರಣ ಘನ ರಾಜಿತ ಸುಂದರ ಅ.ಪ

ಧೀರನಮೋ ಸುವಿಚಾರ ನಮೋ

ಯದುವೀರ ನಮೋ ರಜದೂರ ನಮೊ

ಮಾರನಮೋ ಗಂಭೀರ ನಮೊ ಭವಹಾರ ನಮೋ

ಸುವಿಚಾರನಮೊ ದಧಿ ಚೋರ ನಮೊ 1

ಜನನ ಮರಣ ಜರ ರಹಿತ ನಮೋ ಪಾವನ ಪದ

ಪಂಕೇರುಹ ನಯನ ನಮೋ

ಮನ ವಚನಕೆ ಸಿಗದ ನಿಮಿಷ ಪತಿ

ನಿನ್ನನೆ ಬೇಡುವೆ ಪೊರೆಯೆನುತ ಕರಮುಗಿದು 2

ರಾಮ ರಾವಣಾಂತಕ ಶೌರಿ ಶುಭ

ನಾಮ ಭಕ್ತ ಜನ ಹಿತಕಾರಿ

ಸಾಮ ವಂದ್ಯ ಸುತ್ರಾಮ ಅನುಜ ನಿ

ಸ್ಸೀಮ ಮಹಿಮ ಶಿರಿಧಾಮ ಅನಘ ನಮೊ 3

ಅನ್ಯನೆ ನಾ ನಿನ್ನಗೆ ದೇವ ಸಾಮಾನ್ಯನೆ

ಅಭಿಮನ್ಯುನ ಮಾವಾ

ಇನ್ನೆನೆನ್ನದೆ ನಿನ್ನಿಂ ಲಭಿಸಿದ

ನುಣ್ಣುವ ಯನ್ನನು ಮನ್ನಿಸದಿರುವರೆ 4

ಹಿರಿಯರ ದಯವಿರುವುದು ಸರೆ

ನೀ ಪೊರೆವಿ ಬಿಡದೆ ಯಂಬೋದು ಖರೆ

ಸ್ವರಸ್ವರ ಘಸಿದಾಲ್ಪರಿದ ಮೇಲೆ ಸುಧೆ ಗರಿವರ

ತೆರ ಚರಿಪುದು ಧರವೆ 5

ದಾಸರ ಪೊರೆಯಲು ದಾಶರಥೇ

ನೀ ಬ್ಯಾಸರ ಬಿಡುವರೆ ಅಮಿತ ಮತೆ

ಶ್ರೀಶಾನಿಮಿತ್ಯ ಬಂಧುಯೆನಿಸಿ

ಉದಾಸಿಸೆ ಆಗಮ ರಾಶಿಗೆ ಶೋಭವೆ 6

ಘಾಸಿಗೊಳಿಸುವರೆ ಸೈಸೈಸೈ ನೀ

ನೀಶನಾದದಕೆ ಫಲವೇನೈ

ಪೋಷಕ ನೀನೆಂದಾಸಿಸಿದವರನು

ನೀ ಸಲಹದೆ ಬರೆ ಸೋಸಿಲಿ ಮೆರೆವರೆ 7

ಧೃವನ ಪೊರೆದ ಬಲುವೇನಾಯ್ತೈ

ಉದ್ಧವಗೆ ವಲಿದ ದಯ ಏಲ್ಹೊಯತೈ

ಬವರದೊಳಗೆ ಪಾಂಡವರ ಕಾಯ್ದ ಮತಿ ಸವಿಯುತೆ

ಪವನಪಸವಿದ ಸತತ ಸುಖ 8

ಘನ್ನ ಕರುಣಿ ನೀ ನಹುದೇನೊ

ಆಪನ್ನ ರಾಪ್ತ ನೀ ನಿಜವೇನೋ

ಸೊನ್ನೊಡಲಾಂಡಗ ನೀನಾದರೆ ಗತ

ಮನ್ಯುನಾಗಿ ಜವ ನಿನ್ನನೆ ತೋರಿಸು 9

ತಂದಿನ ಪಾಲಿಸಿ ಮಗನನ್ನು ಬೇಕೆಂದು

ಕೊಂದ ಕೃಷ್ಣನೆ ನೀನು

ಹಿಂದಿನ ತೆರ ಎನ್ನಂದವ ಕಡಿಸದೆ

ತಂದು ತೋರೊತವ ಸುಂದರ ಪದಯುಗ10

ಕಂದುಗೊರಳನುತ ಪೊರೆಯೆಂದು

ಬಲು ವಂದಿಸಿದರು ತ್ವರ ನೀ ಬಂದು

ಕಂದನ ಕರದ್ಯಾಕೆಂದು ಕೇಳ್ದದಕೆ

ನೊಂದು ಬಿಡಿ ನುಡಿ ಗಳೆಂದೆನು ಕ್ಷಮಿಸೈ 11

ಬಲು ಮಂದಿನ ಸಲಹಿದಿ ನೀನು

ಅವರೊಳಗೆ ಓರ್ವನಾನಲ್ಲೇನೊ

ನೆಲೆಗಾಣದೆ ತವ ಜಲಜ ಪಾದ

ಹಂಬಲಿಸುವರರ್ಥವ ಸಲಿಸದೆ ಬಿಡುವರೆ 12

ಬೇಡಿಕೊಂಬುವದೊಂದೆ ಬಲ್ಲೆ

ಅದುಕೂಡಾ ತಿಳಿದು ನೋಡಲು ಸುಳ್ಳೆ

ಬೇಡಿ ಬೇಡಿಸುವಿ ಮಾಡಿ ಮಾಡಿಸುವಿ

ರೂಢಿಪತಿ ನೀನಾಡಿದ ನಾಡುವೆ 13

ನಾಗಶಯನ ನೀ ಬದುಕಿರಲು

ಎನಗಾಗ ಬೇಕೆ ಕಲಬಾಧೆಗಳು

ಸಾಗರಾಂಬರಪ ಸುತನಿಗೆ ಪುರ ಜನ

ಬಾಗದೆ ಅಣಕಿಸಿಧಾಂಗಲ್ಲವೆ ಇದು 14

ಕರೆದರೆ ಬರುವೆನು ನಿನ್ನಡಿಗೆ ಧಿ

ಕ್ಕರಿಸಲು ಮರುಗುವೆ ಮನದಾಗೆ

ನಿರ್ವಿಣ್ಯನು ಪರತಂತ್ರನು ನಾನಿ

ನ್ನೆರಳಲ್ಲವೆ ಮದ್ಗುರುವರ ವರದಾ 15

ಅಲ್ಲದ ಜನರಿಂದಲಿ ನೀನು ಬರೆ

ಕಲ್ಲಿನ ರೂಪದಿ ಪೂಜಿಯನು

ಗೊಳ್ಳುವ ಬಗೆ ನಾನೊಲ್ಲೆ ನಿನ್ನ ಶಿರಿ

ನಲ್ಲೆ ಸಹಿತ ಬಂದು ನಿಲ್ಲೊ ಅರ್ಚಿಸುವೆ 16

ಕಣ್ಣಲಿ ತವದರ್ಶನ ಅಮೃತ

ಎಂದುಣ್ಣುವೆ ಆದಿನ ಭವ ತ್ರಾತಾ

ಘನ ಕರುಣಿ ಬಾರೆನೆ ಬರುವೆನು

ಎಂದೆನ್ನುವ ಬುಧ ನುಡಿ ನನ್ನಿಯೆನ್ನುವೆನು 17

ಭಿಡೆಯ ಬಾರದೆ ಬಲು ಘನ್ನಾ

ನಾನುಡಿಯು ವಡ್ಡಿ ಬೇಡಿದರನ್ನ

ಕೊಡಗೈಯವನಿಗೆ ಲೋಭವು

ಎಲ್ಲಂದಡರಿತು ನುಡಿ ನುಡಿ ಕಡಲಜಳೊಡೆಯನೆ18

ನ್ಯಾಯಕೆ ಅಧಿಪ ನೀನೆ ಜೀಯಾ

ಅನ್ಯಾಯಕೆ ಪೇಳುವರಾರೈಯ್ಯ

ಮಾಯವೆಂಬೊ ಘನ ಘಾಯವುಎನ್ನನು

ನೋಯಿಸುತಿದೆ ಜವಮಾಯಿ ಸುಭೀಷಿಜನೆ 19

ವರುಣಗೆ ವಾರಿಯು ನೀನಯ್ಯ ದಿನ

ಕರನಿಗೆ ಮಿತ್ರನು ನೀನಯ್ಯ

ಸುರಪಗೆ ಇಂದ್ರನು ಉರಗಕೆ ಶೇಷನು

ಸರ್ವವು ನೀನೆಂದರಿತೆನು ಕರುಣಿಸು 20

ಹನುಮಗೆ ಪ್ರಾಣ ಮೂರೊಂದು

ಆನನನಿಗೆ ವೇಧನು ನೀನಂದು

ಮನಸಿಗೆ ನೀ ಮನ ಜೀವಕೆ ಜೀವನ

ಎನುತ ಅರಿದು ನಮೊ ಎನ್ನುವೆ ಕರಮುಗಿದು 21

ಮೂಗಣ್ಣಗೆ ರುದ್ರನು ನೀನೆಧರೆ

ಆಗಸ ಸಾಗರ ಧಾರಕನೆ

ಶ್ರೀ ಗುರು ರಘುಪತಿ ರಾಗ ಪಾತ್ರ

ನೀನಾಗಿ ಎನ್ನ ಭವ ನೀಗದೆ ಬಿಡುವರೆ 22

ಪದುಮನಾಭ ನಿನ್ನನು ಕುರಿತು ನಾ

ನೊದರುವ ನುಡಿಗಳು ಚಿತ್ರವತು

ವಿಧಿಪತ್ರವನಾಂತು ನಿನ್ನ ಪಾದ

ವದಗಿಸದಲೆ ಬರೆ ಪದವೆನಿಸಿದವೆ 23

ಸ್ತವನಕೆ ವಲಿಯದೆ ಇರೆ ನಮನ

ಗೈಯುವೆ ಇಕೊ ನೋಡೆ ದಾಸ್ಯತನಾ

ಅವನಿಪ ಸರ್ವಕೆ ವಲಿಯದೆ ಇರೆ

ಬೈಯುವೆ ಬಡಿಯುವೆ ಸಿಕ್ಕರೆ ಸೆರೆ ಪಿಡಿಯುವೆ 24

ಚೋರನೆ ನೀ ನಡಗಿದೆಯಾಕೆ

ಸ್ಮøತಿ ದೂರನೆ ಎನ್ನನು ಮರಿವದೇಕೆ

ಆರು ನಿನಗೆ ವೈಯಾರವು ಈ ಪರಿ

ಕಾರುಣ್ಯದಿ ಕಲಿಸಿದರೋ ಕರಿವರದಾ 25

ಮರೆದಿಯ ನೀ ಕನಿಕರ ಬಡುವ ಸ್ಥಿತಿ ನೀ

ಜರದರೆ ನಮಗಿನ್ನೇನು ಗತಿ

ಪರಿಪರಿ ವರಲು ವರಲಿ ದಯಮಾಡದೆ

ಇರವದು ನಿನ್ನಗೆ ಮರಿಯಾದಿಯೆ ಹರಿ 26

ರೂಪ ತೋರಲೆನ್ನುವಿಯಾ

ಆಹದೆ ಪೇಳಲೊ ಹೇ ವಿಗತಾಗಭಯ

ಪಾಪಬಾರದೆ ಈ ಪರಿಯನ್ನನು

ನೀ ಪಿಡಿಸೆ ಗತತಾಪ ಶ್ರೀಪ ಹರಿ 27

ಸುರತನು ಸಾಕದೆ ಬಿಟ್ಟವಗೆ ತನ್ನ

ಸತಿಯಳ ಖತಿಯೊಳಗಿಟ್ಟವಗೆ

ಕ್ಷಿತಿಯರು ಏನೆನ್ನುವರು ಮನದೊಳಗೆ

ಕೃತಿ ಪತಿ ಯೋಚಿಸಿ ಹಿತಗೈಯನ್ನೊಳು 28

ಶಿರಿಗೋವಿಂದ ವಿಠಲ ಪಾಹಿ

ಗುರುವರ ರಘುಪತಿನುತ ಪದ ಪಾಹಿ

ಬರೆ ಮಾತಲ್ಲವೊ ತ್ವರ ತವ ಪಾದ

ಸಂದರ್ಶನ ಕೊಡದಿರೆ ಸಿರಿ ಸುರರಾಣೆ 29

****