ಪುರಂದರದಾಸರು
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪ
ಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1
ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2
ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3
ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4
ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
***

pallavi
Aru bAraru sankaTarobbaru nArAyaNa divyanAma ondallade
caraNam 1
hottu navamAsa pariyanta garbhadali atyanta nOvu benegaLa tindu
tuttu buddhiya koTTu salahida tAyiyu attu kaLuhuvaLallade sankaTa bAraLu
caraNam 2
neredidda purajana viprarigniya sAkSi karaviDidu kaidhAre erasikoNDu
taruNi tannaya gaNDananu muTTalammade nEre Enu gati tanage hELanammaLallade
caraNam 3
mane makkaLivarenna tanuvu oDave erdaDu ghanavAgi nambire nannavendu
anumAnavEtake jIvahOda bhaLika ghana hottu maneyali irisikoLLaro dEva
caraNam 4
Atma baLalidAga bandhugaLu bandu hottu horagehAku entembaru
hottu koNDu hOgi agniyali biDisu matte bennanu tirugadale bAhOrallade
caraNam 5
haraNa hOgada munna hariya sEveya mADi paralOka sAyujya paDedu koNDu
karuNi krpALu shrI purandara viTTalana nere nambi bhajisi nI sukhiyAgo manujA
***