Showing posts with label ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ venkatesha stotra gopalakrishna vittala. Show all posts
Showing posts with label ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ venkatesha stotra gopalakrishna vittala. Show all posts

Monday 2 August 2021

ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ venkatesha stotra ankita gopalakrishna vittala

venkatesha stotra

ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ

ಸಾಕಾರರೂಪ ತೋರೋ

ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು

ನೀ ಕರುಣಿಸೀಗ ಕಾಯೊ 1

ಆಕಾಶರಾಜನ್ನ ವಾಕು ಲಾಲಿಸುತ ನೀ

ಬೇಕೆಂದು ಬೆಟ್ಟದಲ್ಲಿ

ಲೋಕದ ಜನರನ್ನು ಸಾಕುತ್ತ ನಿಂತಿರುವ

ಆಕಳ ಕಾಯ್ದ ದೇವಾ 2

ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ

ಘನರೂಪವನ್ನೆ ತೋರೊ

ಅನುಮಾನವ್ಯಾಕಿನ್ನು ಮುನಿವಂದ್ಯ ಎನ್ನನೀ

ಅನುರಾಗದಿಂದ ಸಲಹೋ 3

ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ

ಸಂಕಟಗಳನೆ ಹರಿಸೊ

ಶಂಖಚಕ್ರಾಂಕಿತನೆ ಪಂಕಜಪಾದ ಮನ

ಪಂಕಜದೊಳಗೆ ತೋರೊ 4

ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ

ಪದ್ಮ ಪಾದವೆ ಗತಿಯೊ

ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ

ಪದ್ಮಾದಿ ನಿನ್ನ ತೋರೊ 5

ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ

ದಿಷ್ಟಾವ ಸಲಿಸಿ ಕಾಯೋ

ಶಿಷ್ಟಾರ ಸಂಗವನು ಕೊಟ್ಟೂ ನಿನ್ನಯ e್ಞÁನ

ಥಟ್ಟಾನೆ ಮನಕೆ ತೋರೊ 6

ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು

ಮತ್ತಲ್ಲ ಕರ್ಮ ಮಾಳ್ಪೆ

ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ

ನಿತ್ಯಾಮೂರುತಿ ನೀ ಎಂದೂ 7

ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ

ಬಗಣೀತ ಮಹಿಮ ದೇವಾ

ಖಗರಾಜ ವಾಹನನೆ ನಗೆಮೊಗದ ಚೆಲುವ ಪ

ನ್ನಗಶಾಯಿ ಸಲಹೊ ಎನ್ನ 8

ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ

ನಿತ್ಯಾ ವಿಯೊಗಿ ದೇವಾ

ನಿತ್ಯಾ ಮುಕ್ತಾಶ್ರಯನೆ ನಿತ್ಯ ನಿರ್ವೀಕಾರ

ನಿತ್ಯಾ ಕಲ್ಯಾಣಪೂರ್ಣ 9

ಜೀವಾಂತರಾತ್ಮಕನೆ ಜೀವಾ ನಿಯಾಮಕನೆ

ಜೀವಾದಿ ಭಿನ್ನ ದೇವಾ

ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ

ಜೀವಾರ ಕರ್ಮಕರ್ತ 10

ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ

ವ್ಯಾಪ್ತಾನಾಗಿರುವೆ ಜಗದಿ

ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ

ಸತ್ಯಾಧಿಪತಿಯ ವಂದ್ಯ 11

ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ

ಛೇದೀಸಿ ತಮನ ಕೊಂದೂ

ಮೋದದಲಿ ನಿಗಮ ತಂದಾದರದಿ ಸುತಗಿತ್ತೆ

ಶ್ರೀಧರನೆ ಮಚ್ಛರೂಪಿ 12

ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು

ಕರುಣೆಯಿಂದಾಲಿ ಬಂದೂ

ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ

ವರ ಕೂರ್ಮರೂಪಿ ಸಲಹೊ 13

ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ

ಛೇದೀಸಿ ಅವನ ಕಾಯಾ

ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ

ಆದಿ ವರಾಹ ಕಾಯೊ 14

ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ

ಸೃಷ್ಟೀಶ ಪೊರೆಯೊ ಎನಲು

ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು

ಪುಟ್ಟಾನ ಕಾಯ್ದ ನೃಹರಿ15

ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು

ಪೇಂದ್ರಾ ನೀನಾಗಿ ಬಂದೂ

ಇಂದ್ರಾರಿಗೇಸುತಲ ಚಂದಾದಿತ್ತು ನೀ

ನಿಂದ್ರಾಗೆ ಸ್ವರ್ಗವಿತ್ತೆ 16

ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು

ಮತಿವಂತನೆನಿಸಿ ಮೆರೆದೇ

ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ

ಪ್ರತಿ ಭಾರ್ಗವಾನೆ ಕಾಯೋ 17

ಸೇತು ಬಂಧನಗೈದು ಖ್ಯಾತ ರಾವಣನೊರಸಿ

ಸೀತೇಯ ತಂದ ರಾಮಾ

ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ

ಪ್ರೀತಿಯಿಂದೆನ್ನ ಕಾಯೊ 18

ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ

ವನಜಾಕ್ಷಿಯರನೆ ಕಾಯ್ದೆ

ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ

ಸನಕಾದಿ ವಂದ್ಯ ಸಲಹೋ 19

ತ್ರಿಪುರಾಲಲನೆಯಾರ ವ್ರತಭಂಗವನೆಗೈದು

ನಿಪುಣಾನೆಂದೆನಿಸಿ ಮೆರೆದೆ

ಕೃಪಣಾವತ್ಸಲ ಬುದ್ಧ ತ್ರಿಪುರಾರಿ ವಂದ್ಯ ಹರಿ

ಕೃಪೆಮಾಡಿ ಸಲಹೊ ಎನ್ನ 20

ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು

ತಲೆಯಾ ಚೆಂಡಾಡಿ ಮೆರೆದೆ

ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ

ನಳಿನಾಕ್ಷ ಕಲ್ಕಿ ಕಾಯೊ 21

ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ

ಶಕ್ತಾವಂತನೆ ಸ್ವಾಮಿ

ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ

ಮುಕ್ತಾರಿಗೊಡೆಯ ನೀನೆ 22

ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ

ಕೆಂದೂ ನೀ ನಾಗಗಿರಿಗೆ

ನಂದಾಕಂದಾನೆ ಹರಿ ಇಂದಿರೆಯರಸ ಬಹು

ಸುಂದಾರ ಶ್ರೀನಿವಾಸ23

ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ

ವಿಂದಾನ ಗಿರಿಯ ಯಾತ್ರೇ

ಸಂದೀಸೆ ವೇಂಕಟನ ಸಂದಾರುಶನದಿಂದ

ಬೆಂದೂ ಹೋಗುವುದು ದುರಿತ 24

ಜಯ ಗುರುಗಳಂತರ್ಯ ಜಯ ನಾಗಶಯನ ಹರೆ

ಜಯ ವೆಂಕಟಾದ್ರಿನಿಲಯ

ಜಯ ತಂದೆ ಮುದ್ದುಮೋಹನ ದಾಸವರದ ಜಯ

ಜಯ ಪದ್ಮನಾಭ ಜಯ ಭೋ 25

ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ

ಕಾಮೀತವೀವ ಪ್ರಭುವೇ

ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ

ಕಾಮೀತವೀಯೊ ದೇವಾ 26

ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ

ಕಷ್ಟಾವ ಬಿಡಿಸಿ ಕಾಯೋ

ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ

ಶ್ರೇಷ್ಠಾ ಶ್ರೀ ಗುರುವರದನೇ 27

****