Showing posts with label ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣ purandara vittala. Show all posts
Showing posts with label ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣ purandara vittala. Show all posts

Thursday, 5 December 2019

ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣ purandara vittala

ರಾಗ ಕೇದಾರಗೌಳ ಅಟತಾಳ

ನಂಬು ಕಂಡ್ಯ ಮನವೆ
ನಂಬು ಶ್ರೀ ಕೃಷ್ಣನ ಚರಣಕಮಲವ ||ಪ||

ಒಂಭತ್ತು ಬಾಗಿಲ ಪಟ್ಟಣದೊಳಗೆ
ಸಂಭ್ರಮದಿಂದ ಬೈಲಾಗದ ಮುನ್ನ ನೀ ||

ಆರು ಮಂದಿ ಕಳ್ಳರು ಊರೊಳಗೆ
ಸೂರೆಮಾಡಿ ಘಾಸಿ ಮಾಡದ ಮುನ್ನ ನೀ ||

ಏಳು ಸುತ್ತಿನ ಕೋಟೆ ಘನದುರ್ಗವನ್ನು
ಕಾಲನವರು ಬಂದು ಕರೆಯದ ಮುನ್ನ ನೀ ||

ದೇಹ ನಾಯಕ ದೇವರು ತಾವು
ದೇಹದ ಬಿಡಕೆ ಬಿಡಪಾದ ಮುನ್ನ ನೀ ||

ಪುರವಿದು ಸ್ಥಿರವಲ್ಲ ಮೆಚ್ಚಿ ಕೆಡಲುಬೇಡ
ಪುರಂದರವಿಠಲನ್ನ ಆ ಪಾದಪದುಮವ ||
***

pallavi

nambu kaNDya manave nambu shrI krSNana caraNa kamalava

caraNam 1

ombhattu bAgila paTTaNadoLage sambhramadinda balilAgada munna nI

caraNam 2

Aru mandi kaLLaru UroLage surEmADi gAsi mADada munna nI

caraNam 3

Elu suttina kODe ghanadurgavannu kAlavanaru bandu kareyada munna nI

caraNam 4

dEha nAyaka dEvaru tAvu dEhada biDage biDabAda munna nI

caraNam 5

puravidu sthiravalla mecci keDalu bEDa purandara viTTlanna A pAdapadumava
***