Showing posts with label ಶರಣಜನ ಕಲ್ಪತರು ಯತಿರಾಜ ಲೋಕಗುರು raghunayaka. Show all posts
Showing posts with label ಶರಣಜನ ಕಲ್ಪತರು ಯತಿರಾಜ ಲೋಕಗುರು raghunayaka. Show all posts

Monday, 6 September 2021

ಶರಣಜನ ಕಲ್ಪತರು ಯತಿರಾಜ ಲೋಕಗುರು ankita raghunayaka

 ankita ರಘುನಾಯಕ/ರಘುರಾಮ (ಅನೇಕ)

ರಾಗ: ಶಂಕರಾಭರಣ ತಾಳ: ಝಂಪೆ


ಶರಣಜನ ಕಲ್ಪತರು ಯತಿರಾಜ ಲೋಕಗುರು


ವರದ ಕಾಮಿತ ಫಲದ ರಾಘವೇಂದ್ರ ಅ. ಪ


ಕನಸಿನಲಿ ಕರುಣದಲಿ ದರುಶನವ ನೀಡುವನು

ಮುನಿಮಾನಿತನು ತಾನೆ ಮುದದೊಳೊಲಿವ

ವಿನಯದಲಿ ನಮಿಸಿದರ ಕಾಮಿತಾರ್ಥಗಳೀವ

ಜನುಮಜನುಮಾಂತರದ ದೋಷ ತೊಳೆವ 1

ರಾಕ್ಷಸನ ಮಗನಾಗಿ ನರಸಿಂಹನನ್ನೊಲಿಸಿ

ರಕ್ಷಿಸಿದ ಕುಹ ರೋಗದಿಂದ ನೃಪನ

ಪಕ್ಷಿವಾಹನ ವೇಣುಗೋಪಾಲ ಕೃಪೆವಡೆದು 

ರಕ್ಷನಾದನು ಸರ್ವ ಭಕ್ತಕುಲಕೆ 2

ವಾರಿನಿಧಿ ಗಂಭೀರ ಶರಣಜನ ಮಂದಾರ

ಸೂರಿಜನ ಸುಮ್ಮಾನ ರಾಘವೇಂದ್ರ

ಶ್ರೀರಮಣ ರಘುವೀರ ಪದ ಸರೋರುಹ ಭೃಂಗ

ಕಾರುಣ್ಯ ಗುಣಪೂರ್ಣ ಗುರುವರೇಣ್ಯ 3

****