Showing posts with label ಕೃಷ್ಣ ದ್ವೈಪಾಯನ ಕೃಪಣವತ್ಸಲ jagannatha vittala. Show all posts
Showing posts with label ಕೃಷ್ಣ ದ್ವೈಪಾಯನ ಕೃಪಣವತ್ಸಲ jagannatha vittala. Show all posts

Saturday, 14 December 2019

ಕೃಷ್ಣ ದ್ವೈಪಾಯನ ಕೃಪಣವತ್ಸಲ ankita jagannatha vittala

ಜಗನ್ನಾಥದಾಸರು
ಕೃಷ್ಣ ದ್ವೈಪಾಯನ ಕೃಪಣವತ್ಸಲ ಪರ
ಮೇಷ್ಠಿ ಜನಕನ ತೋರೊ ಪ

ಅನಿಮಿಷ ಕುಲಗುರು ಆನಂದತೀರ್ಥ ಸ
ನ್ಮುನಿಮತ ವಿಮಲಾಂಬುಜಾ ಅ.ಪ.

ದಿನಕರ ದಯದಿ ನೋಡೆನ್ನನು ಬಾದರಾ
ಯಣ ನಾಮಧೇಯರ ತನಯ ಸಂಯಮಿ ವರ 1

ಭೀಮ ತರಂಗಿಣಿ ಬದಿಗನೆನಿಸಿ ಸೀತಾ
ಕರ್ಮ ಗುಣಕೀರ್ತನಗೈವ
ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ
ಸುಜನ ಶಿರೋಮಣಿ 2

ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ
ಹಗೆಗೊಂಬ ಪಾಪಿಗಳ
ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ
ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
*******