..
ಹೋಗುಣು ನಡಿ ಸಾಧುರ ನೋಡುವಾ ಬೇಗ ಪ್ರಾಣನಾಥನ ಕೂಡುವಾ ಪ
ವ್ಯರ್ಥ ಆಯುಷ್ಯ ವೆಚ್ಚ ಮಾಡಬೇಡಿ ಹಿತಾಹಿತ ವಿವರಿಸಿ ನೋಡಿ |ನೀತಿ ಮಾರ್ಗದಲಿ ನಡೆದಾಡಿಭೀತಿ ಭ್ರಮೆ ಮೂಲದಿ ಹೋಗಾಡಿ 1
ಮನಸಿನ ಕಲ್ಪನೆಯ ಬಿಟ್ಟುಗುಣತ್ರಯದ ವೃತ್ತಿ ಕಡೆಗಿಟ್ಟು |ಪೂರ್ಣ ಜ್ಞಾನ ವೈರಾಗ್ಯ ಒತ್ತಿಟ್ಟುಘನ ಹರುಷ ತಮ್ಮೊಳಗಿಂಬಿಟ್ಟು 2
ನಾನಾ ತೀರ್ಥ ಉಂಟು ಸಾಧುರಲ್ಲಿನಾನೇನೆಂದು ಆ ಸುಖ ಹೇಳಲಿ ಜ್ಞಾನಾಂಬುಧಿ ಸಾಧುರೇ ನೋಡಲಿಜ್ಞಾನಬೋಧ ಸಾರಿದ ಭಕ್ತೀಲಿ 3
***