Showing posts with label ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ shyamasundara. Show all posts
Showing posts with label ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ shyamasundara. Show all posts

Wednesday 1 September 2021

ಹಾಕುವೆ ಸುಮಾಲಾ ಸುಶೀಲಾ ಜೀವದೊಡೆಯ ಪರದೇವತೆ ನೀನೆಂಬೊ ankita shyamasundara

..

ಹಾಕುವೆ ಸುಮಾಲಾ ಸುಶೀಲಾ

ಜೀವದೊಡೆಯ ಪರದೇವತೆ ನೀನೆಂಬೊ

ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ 1


ಸರಸಿಜನಾಭನೆ ಸುರದೊಡೆಯನೆ ನೀ

ವಿರಚಿಸಿದಂಥ ಪರಿಮಳ ಹಾರುವ

ಸರುವ ಹಾರವ ತಂದು ಕೊರಳಿಗೆ ಹಾಕುವೆ 2


ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ

ಭಾಮೆಯನಗಲದೆ ಪ್ರೇಮದಿ ಪೊರೆಯೆಂದು 3

***