ಉದರವೈರಾಗ್ಯವಿದು, ನಮ್ಮ
ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ ||
ಉದಯಕಾಲದಲೆದ್ದು ಗದಗದ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯವ ತೋರುವುದೂ ||
ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ
ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ
ವಂಚನೆಯಿಂದಲಿ ಪೂಜೆಯ ಮಾಡುವುದು ||
ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆ ಮುಸುಕು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿಯೆಂದೆನಿಸುವುದು ||
ಬೂಟಕತನದಲಿ ಬಹಳ ಭಕುತಿ ಮಾಡಿ
ದಿಟನೀತ ಸರಿಯಾರಿಲ್ಲೆನಿಸಿ
ನಾಟಕ ಸ್ತ್ರೀಯಂತೆ ಬಯಲು ಡಂಭವ ತೋರಿ
ಊಟದ ಮಾರ್ಗದ ಜ್ಞಾನವಿದಲ್ಲದೆ ||
ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ
ಏನಾದರು ಹರಿ ಪ್ರೇರಣೆಯೆಂದು
ಧ್ಯಾನಿಸಿ ಮೌನದಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು ||
***ರಾಗ ನಾದನಾಮಕ್ರಿಯೆ ಆದಿತಾಳ (raga tala may differ in audio)
pallavi
udara vairAgyavidu namma padumanAbhanalli lEsha bhakutiyilla
caraNam 1
udaya kAladaleddu gada gada naDuguta nadiyali mindenendu higgudali mada
matsara krOdha oLage tumbiTTu koNDu badiyaliddavarigAshcaryava tOruvu dUdara
caraNam 2
kancugArana biDAra dandadi kancu hittALe pratimegaLa nerahi
minca bEkendu balu jyAtigaLanu hacci vancaneyindali pUjeya mADuvu dUdara
caraNam 3
karadali japamaNi bAyali mantravu arive musuku mOrEge hAki
para satiyara guNa manadali smarisuta parama vairAgyashAli yendenisuvu dUdara
caraNam 4
bUTaka tanadali bahaLa bhakuti mADi diTanIta sari yArillenisi
nATaka strIyante bayalu Dambhava tOri Utada mArgada jnAnavillade udara
caraNam 5
nAnu embudu biTTu jnAnigaLoDanADi EnAdaru hari prEraNeyendu
dhyAnisi maunadi purandara viTTalana kANade mADida kAryagaLellavu udara
***
ಉದರ ವೈರಾಗ್ಯವಿದೂ||2||
ನಮ್ಮ ಪದುಮನಾಭನಲಿ ಲೇಶ ಭಕುತಿಯಿಲ್ಲ
||ಉದರ||
ಉದಯ ಕಾಲದಲೆದ್ದು ಗಡಗಡ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ,ಮತ್ಸರ ಕ್ರೋಧ
ಒಳಗೆ ತುಂಬಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯ ತೋರುವುದು 1
ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಳೆ ಪ್ರತಿಮೆಯ ನೆರಹಿ
ಮಿಂಚ ಬೇಕೆನುತ ಜ್ಯೋತಿಗಳನು ಹಚ್ಚಿ
ವಂಚನೆಯಿಂದಲಿ ಪೂಜೆಯ ಮಾಡುದು 2
ಕರದಲಿ ಜಪಮಣಿ ,ಬಾಯಲಿ ಮಂತ್ರವು
ಅರಿವೆ ಮುಸುಕು ಮೋರೆಗೆ ಹಾಕಿ
ಪರಸತಿಯರ ಉಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿ ಎಂದೆನಿಪುದು 3
ಬೂಟಕತನದಲಿ ಬಹಳ ಭಕುತಿ ಮಾಡಿ
ದಿಟ ನೀತ ಸರಿ ಯಾರಿಲ್ಲೆನಿಸಿ
ನಾಟಕಸ್ತ್ರೀಯಂತೆ ಬಯಲಢಂಭವ ತೋರಿ
ಊಟದ ಮಾರ್ಗದ ದಾರಿ ಇದಲ್ಲದೆ 4
ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ
ಏನಾದರು ಹರಿ ಪ್ರೇರಣೆ ಎಂದು
ಧ್ಯಾನಿಸಿ ಮೌನದಿ ಪುರಂದರವಿಠಲನ
ಕಾಣದೆ ಮಾಡಿದ ಕಾರ್ಯಗಳೆಲ್ಲವು 5
*****