Showing posts with label ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ shyamasundara. Show all posts
Showing posts with label ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ shyamasundara. Show all posts

Wednesday, 1 September 2021

ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ankita shyamasundara

 ..

ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ


ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ


ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ |

ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1


ಧುರದಿ ರವಿಸುತ | ಉರುಗಗಳವನು ಭರದಿ

ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ

ಸಲಹಿದ ಶೌರಿಗೆ ಮುರವೈರಿಗೆ 2


ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ |

ತಟತಸನ್ನಿಭ ಶಾಮಸುಂದರವಿಠಲಗೆ

ವಿಪಗಮನಗೆ 3

***